
ಪಿ-ಫಜರ್ ಹಾಗೂ ಅಮೆರಿಕ ಬಯೋಟೆಕ್ ಕಂಪನಿ ಕೊರೋನಾ ಲಸಿಕೆಯನ್ನು ಸಿದ್ಧಪಡಿಸಿವೆ. ಈಗಾಗಲೇ ಅಮೆರಿಕದಲ್ಲಿ ಈ ಲಸಿಕೆಗಳ ವಿತರಣೆ ಕಾರ್ಯ ಶುರುವಾಗಿದೆ.
ಅಮೆರಿಕದಲ್ಲಿ ವ್ಯಾಕ್ಸಿನ್ ನೀಡಲು ಪಿ-ಫಿಜರ್, ಮಡೆರ್ನಾ ನಡುವೆ ಪೈಪೋಟಿ ಏರ್ಪಟ್ಟಿದೆ. ಪಿ-ಫಜರ್, ಅಮೆರಿಕ ಬಯೋಟೆಕ್ ಕಂಪನಿ ಲಸಿಕೆ ಸಿದ್ಧಪಡಿಸಿದೆ. ಪಿ-ಫಿಜರ್, ಮಡೆರ್ನಾ ವ್ಯಾಕ್ಸಿನ್ ಶೇಕಡಾ 95ರಷ್ಟು ಸಕ್ಸಸ್ ಗಳಿಸಿದೆ. ಕೋವಿಡ್ ವೈರಸ್ ವಿರುದ್ಧ ವ್ಯಾಕ್ಸಿನ್ ಹೋರಾಟ ಕೊನೆಗೂ ಫಲ ಕೊಟ್ಟಿದೆ. 20 ಮಿಲಿಯನ್ ಕೊರೋನಾ ವ್ಯಾಕ್ಸಿನ್ ತಯಾರಿಸೋದಾಗಿ ಮಡೆರ್ನಾ ಹೇಳಿದೆ. ಇನ್ನು ಈ ವರ್ಷಾಂತ್ಯದ ವೇಳೆಗೆ 50 ಮಿಲಿಯನ್ ಡೋಸ್ ಕೊಡೋದಾಗಿ ಪಿ-ಫಿಜರ್ ಮಾಹಿತಿ ನೀಡಿದೆ. ಅಮೆರಿಕದ ನಾಲ್ಕು ರಾಜ್ಯಗಳಲ್ಲಿ ಈ ತಿಂಗಳ ಅಂತ್ಯಕ್ಕೆ ಡೋಸ್ಗಳ ಪೂರೈಕೆಯಾಗಲಿದೆ.
ವಿಶ್ವದ 35 ಮಿಲಿಯನ್ ಜನರಿಗೆ ವ್ಯಾಕ್ಸಿನ್ ಕೊಡಲು ನಾವು ರೆಡಿ ಅಂತ ಎರಡೂ ಕಂಪನಿಗಳು ತಿಳಿಸಿವೆ. ಅಮೆರಿಕಾದ ನಾಲ್ಕು ರಾಜ್ಯಗಳಲ್ಲಿ ಮೊದಲ ಹಂತದ ವ್ಯಾಕ್ಸಿನ್ ಪೂರೈಕೆ ಯಾಗಲಿವೆ. ಭಾರತದ ಸೆರಮ್, ಭಾರತ್ ಬಯೋಟೆಕ್, ಝೈಡಸ್ ಕ್ಯಾಡಿಲ್ಲಾ ಜತೆಯೂ ಮಾತುಕತೆ ನಡೀತಾ ಇದೆ. ಸುರಕ್ಷತೆ, ರೋಗ ನಿರೋಧಕ ಶಕ್ತಿ ಮತ್ತು ಪರಿಣಾಮದ ಬಗ್ಗೆ ಮೊದಲ ಟೆಸ್ಟ್ ನಡೆದಿದೆ. ನಾಲ್ಕು ರಾಜ್ಯಗಳಲ್ಲಿ ಯಶಸ್ಸು ಕಂಡರೆ ಇತರೆ ರಾಜ್ಯಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮತ್ತೊಂದು ಕಡೆ ಯೂರೋಪ್ನಿಂದ ಪಿ-ಫಿಜರ್ಗೆ 200 ಮಿಲಿಯನ್ ಡೋಸ್ಗೆ ಬೇಡಿಕೆ ಬಂದಿದೆ.
Comments are closed.