ಅಂತರಾಷ್ಟ್ರೀಯ

ಅಮೇರಿಕಾದ ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಆಯ್ಕೆ

Pinterest LinkedIn Tumblr


ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಎದುರು ಜೊ ಬೈಡನ್​ ಗೆದ್ದು ಬೀಗಿದ್ದಾರೆ. 290 ಮತಗಳಿಕೆ ಮೂಲಕ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದಾರೆ.

ಇನ್ನು ಗೆದ್ದ ಸಂಭ್ರದಲ್ಲಿರೋ ಬೈಡನ್ ಅಮೆರಿಕ ಜನರಿಗೆ ಕೃತಜ್ಞತೆ ಸಲ್ಲಿಸಿದ್ರು. ಇದು ನನ್ನ ಗೆಲುವಲ್ಲ.. ಪ್ರಜಾಪ್ರಭುತ್ವದ ಗೆಲುವು ಅಂತಾ ಹರ್ಷ ವ್ಯಕ್ತಪಡಿಸಿದ್ರು. ಇನ್ನು ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್​​ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಹಲವು ರಾಜಕೀಯ ನಾಯಕರು, ಗಣ್ಯರು ಅಭಿನಂದನೆ ತಿಳಿಸಿದ್ದಾರೆ.

ಇನ್ನುಅಮೇರಿಕಾಕ್ಕೆ ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾದ ಕಮಲಾ ಹಾರಿಸ್ ಮೊದಲ ಕಪ್ಪು ಮಹಿಳೆ, ಮೊದಲ ಇಂಡಿಯನ್ ಅಮೇರಿಕನ್. ಈ ಪದವಿಯನ್ನು ಅವರು ಭಾರತದಲ್ಲಿರುವ ತಮ್ಮ ತಾಯಿಗೆ ಸಮರ್ಪಿಸಿದ್ದಾರೆ. ಇವರು ಮೂಲತಃ ತಮಿಳುನಾಡಿನವರು. ಅವರ ತಾಯಿ ಶ್ಯಾಮಲಾ ಗೋಪಾಲನ್ ತಂದೆ ಡೊನಾಲ್ಡ್ ಹಾರಿಸ್, ರಾಜಂ ಗೋಪಾಲನ್ ಇವರ ತಾತ, ಇವರಿಗೆ ಇಷ್ಟವಾದ ತಿಂಡಿ ಅಂದರೆ ಇಡ್ಳಿ. ಇವರು ಕ್ರಿಶ್ಚಿಯನ್ ಆದರೂ ಹಿಂದೂ ದೇವಸ್ಥಾನಗಳ ಒಡನಾಟ ಮೊದಲಿನಿಂದಲೂ ಇತ್ತು.

ಇಂದು ನನ್ನ ಈ ಸ್ಥಿತಿಗೆ ಜವಾಬ್ದಾರಿಯುತ ಮಹಳೆಯಾದ ನನ್ನ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಅವರು 19 ನೇ ವಯಸ್ಸಿನಲ್ಲಿ ಭಾರತದಿಂದ ಇಲ್ಲಿಗೆ ಬಂದಾಗ, ಅವರು ಈ ಕ್ಷಣವನ್ನು ಊಹಿಸಿರಲಿಲ್ಲ. ಅಂತ 57 ವರ್ಷದ ಕಮಲಾ ಹಾರಿಸ್ ಭಾವುಕಳಾಗಿ ನುಡಿದಿದ್ದಾರೆ.

Comments are closed.