ರಾಷ್ಟ್ರೀಯ

ಯೋಗಿ ಆದಿತ್ಯನಾಥ್ ಅವರನ್ನು ಭೇಟಿ‌ಯಾದ ಪೇಜಾವರ ಶ್ರೀ: ರಾಮಮಂದಿರ ನಿರ್ಮಾಣ ಬಗ್ಗೆ ಚರ್ಚೆ

Pinterest LinkedIn Tumblr

ಉತ್ತರಪ್ರದೇಶ: ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೋಮವಾರ ಸಂಜೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದರು.

ಈ ಸಂದರ್ಭ ಯೋಗಿಯವರು ಶ್ರೀಗಳವರನ್ನು ಆದರಪೂರ್ವಕ ಬರಮಾಡಿಕೊಂಡರು. ಉಭಯ ಕುಶಲೋಪರಿಯ ಬಳಿಕ ಕೊರೊನಾ ವಿಪತ್ತಿನ ಕುರಿತೂ ವಿಷಯ ಮಾತನಾಡಿ ಲೋಕದೊಳಿತಿಗಾಗಿ ಶ್ರೀ ಕೃಷ್ಣನಲ್ಲಿ ಪ್ರಾರ್ಥಿಸುವಂತೆ ಸಿಎ. ಯೋಗಿ ಅವರು ಶ್ರೀಗಳವರಲ್ಲಿ ವಿನಂತಿಸಿದರು. ಬಳಿಕ ಶ್ರೀರಾಮಮಂದಿರ ನಿರ್ಮಾಣದ ವಿಷಯದ ಕುರಿತಾಗಿಯೂ ಉಭಯರು ಮಾತುಕತೆ ನಡೆಸಿದರು.

ಇದಕ್ಕೂ ಮುನ್ನ ಪೇಜಾವರ ಶ್ರೀಗಳು ಶ್ರೀರಾಮ ಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Comments are closed.