
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯಗಳು ಪ್ರಾರಂಭವಾಗಿದ್ದು, ಸುಮಾರು ಮೂರೂವರೆ ವರ್ಷಗಳಲ್ಲಿ ದೇವಾಲಯ ಸಿದ್ಧವಾಗಲಿದೆ ಎಂದು ಅಂದಾಜಿಸಲಾಗಿದೆ. ಏತನ್ಮಧ್ಯೆ ಅಯೋಧ್ಯೆಯಲ್ಲಿ ದೀಪಾವಳಿ (Diwali)ಯನ್ನು ವಿಶೇಷ ರೀತಿಯಲ್ಲಿ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ರಾಮ್ಲಾಲ ತಾತ್ಕಾಲಿಕ ದೇವಾಲಯದಲ್ಲಿ ಭವ್ಯ ಉತ್ಸವಕ್ಕೆ ತಯಾರಿ ಜರುಗಿದ್ದು ಅಯೋಧ್ಯೆಯಾದ್ಯಂತ ಸುಮಾರು 5.51 ಲಕ್ಷ ದಿಯಾಗಳನ್ನು ಬೆಳಗಿಸಲು ಯೋಜಿಸಲಾಗಿದೆ.
492 ವರ್ಷಗಳ ನಂತರ ಮೊದಲ ಬಾರಿಗೆ ದಿವ್ಯ ದೀಪಾವಳಿಯನ್ನು ರಾಮ ಜನ್ಮಭೂಮಿ (Ram Janmabhoomi) ಸಂಕೀರ್ಣದಲ್ಲಿ ಆಯೋಜಿಸಲಾಗುವುದು. ಇದರೊಂದಿಗೆ ತಾತ್ಕಾಲಿಕ ದೇವಾಲಯದಲ್ಲಿರುವ ರಾಮಲಾಲ ಆಸ್ಥಾನವು ಅಸಂಖ್ಯಾತ ದೀಪಗಳಿಂದ ಬೆಳಗಲಿದೆ. ಈ ಮೊದಲು ಈ ಆವರಣದಲ್ಲಿ ಬಹಳ ಸೀಮಿತ ವ್ಯಾಪ್ತಿಯಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿತ್ತು ಮತ್ತು ಅರ್ಚಕರು ಮಾತ್ರ ದೀಪವನ್ನು ಬೆಳಗಿಸುತ್ತಿದ್ದರು.
ಈ ವರ್ಷ ದೀಪಾವಳಿಯ ಸಂದರ್ಭದಲ್ಲಿ ರಾಮ್ಲಾಲ ತಾತ್ಕಾಲಿಕ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ. ಈ ಬಾರಿ ಅಯೋಧ್ಯೆಯು (Ayodhya) ಹೊಸ ದಾಖಲೆ ನಿರ್ಮಿಸಲು ಸಿದ್ಧವಾಗುತ್ತಿದ್ದು ಅಯೋಧ್ಯೆಯಾದ್ಯಂತ 5 ಲಕ್ಷ 51 ಸಾವಿರ ದಿಯಾಗಳನ್ನು ಬೆಳಗಿಸಲು ಯೋಜಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನವೆಂಬರ್ 13 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಸುಂದರ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಮ್ಲಾಲಾದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾತನಾಡಿ, ‘ಈ ಬಾರಿ ರಾಮ್ಲಾಲಾ ಆವರಣದಲ್ಲಿ ದೀಪಾವಳಿ ಆಚರಿಸಲಾಗುವುದು, ಇದು ವಿಶಿಷ್ಟ ಮತ್ತು ಅದ್ಭುತವಾಗಿರಲಿದೆ. ಈ ಬಾರಿ, ತ್ರೇತಾ ಯುಗದಲ್ಲಿ ಅಯೋಧ್ಯೆಯಲ್ಲಿ ಆಚರಿಸಲಾಗುತ್ತಿದ್ದ ದೀಪಾವಳಿಯ ದರ್ಶನವನ್ನು ಎಲ್ಲರೂ ಕಣ್ತುಂಬಿಕೊಳ್ಳಬಹುದು ಎಂದು ಹೇಳಿದರು.
Comments are closed.