ಉಡುಪಿ: ವಿದ್ಯಾರ್ಥಿನಿ ರಕ್ಷಾ ನಾಯಕ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ಆರೋಪಿ ಪ್ರಶಾಂತ್ ಮೊಗವೀರನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಆರಂಭಿಸಲಾಗಿದೆ.

ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣ್ದಲ್ಲಿ ಉಡುಪಿ ನಗರ ಪೊಲೀಸ್ ಠಾಣೆ ಸಿಬ್ಬಂದಿಗಳು ಆಕೆ ಪ್ರಿಯಕರ ಆರೋಪಿ ಪ್ರಶಾಂತ್ ಮೊಗವೀರನನ್ನು ಕಳೆದ ಒಂದು ವಾರದಿಂದ ವಿಚಾರಣೆ ನಡೆಸಿ ವಾಪಸ್ ಕಳುಹಿಸುತ್ತಿದ್ದರು. ಪ್ರಕರಣದಲ್ಲಿ ಆತನ ಪಾತ್ರ ಕಂಡುಬಂದ ಹಿನ್ನೆಲೆ ಆತನನ್ನು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.
ಇನ್ನು ಅಕ್ಟೋಬರ್ 24 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ಷಿತಾಳನ್ನು ಆರೋಪಿ ಪ್ರಶಾಂತ್ ಗಾಂಧಿ ಆಸ್ಪತ್ರೆಗೆ ಕರೆತಂದಿದ್ದ. ಆಕೆಯನ್ನು ದಾಖಲಿಸಿದ ಬಳಿಕ ಆತ ಆಸ್ಪತ್ರೆಯಿಂದ ಪರಾರಿಯಾಗಿದ್ದಲ್ಲದೇ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದ. ಆಸ್ಪತ್ರೆಯಲ್ಲಿ ರಕ್ಷ ನಾಯಕ್ ಕೊನೆಯುಸಿರೆಳೆದಿದ್ದಳು. ಇನ್ನು ಆರೋಪಿ ಪ್ರಶಾಂತ್ ಈಕೆಯ ಜೊತೆ ಲೀವಿಂಗ್ ಇನ್ ರಿಲೇಶನ್ ಶಿಪ್ ವ್ಯವಸ್ಥೆಯಲ್ಲಿದ್ದ.
Comments are closed.