
ಲಕ್ನೋ: ಅಪ್ಪನನ್ನು ಹತ್ಯೆ ಮಾಡಿದ ಪುತ್ರನೊಬ್ಬ ಸಾಕ್ಷ್ಯನಾಶಕ್ಕಾಗಿ 100 ಬಾರಿ ‘ಕ್ರೈಂ ಪೆಟ್ರೋಲ್’ ಧಾರಾವಾಹಿ ನೋಡಿ, ಕೊನೆಗೂ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ 17 ವರ್ಷದ ಯುವಕ ಮಥುರಾ ತಂದೆಯನ್ನು ಕೊಂದ ಆರೋಪಿ. ಮೇ 2ರಂದು ಪತ್ರವೊಂದರ ಸಲುವಾಗಿ ಮನೋಜ್ ಮಿಶ್ರಾ ಮಗನನ್ನು ಬೈಯ್ದಿದ್ದರು. ಈ ಸಂದರ್ಭದಲ್ಲಿ ಸಿಟ್ಟಾದ ಮಗ ಕಬ್ಬಿಣದ ರಾಡ್ ತೆಗೆದುಕೊಂಡು ತಂದೆ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ನೆಲಕ್ಕೆ ಬಿದ್ದ ತಂದೆಯನ್ನು ಬಟ್ಟೆಯಿಂದ ಕುತ್ತಿಗೆ ಹಿಸುಕಿ ಉಸಿರುಗಟ್ಟಿ ಕೊಂದಿದ್ದಾನೆ. ತಂದೆಯನ್ನು ಹತ್ಯೆ ಮಾಡಿದ ಬಳಿಕ ತಾಯಿಯೇ ಮಗನಿಗೆ ಶವವನ್ನು ಸುಟ್ಟು ಹಾಕುವಂತೆ ತಿಳಿಸಿದ್ದಾಳೆ. ಅಲ್ಲದೇ ತಾಯಿಯ ಸಹಾಯದಿಂದ ಶವವನ್ನು ಆತ ಸ್ಕೂಟಿಯಲ್ಲಿ ತೆಗೆದುಕೊಂಡು ಹೋಗಿ ಕಾಡಿನ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಸುಟ್ಟಿದ್ದಾನೆ. ಬಳಿಕ ಸಾಕ್ಷ್ಯಗಳನ್ನು ಶೌಚಾಲಯ ಶುಚಿಗೊಳಿಸುವ ಕ್ಲಿನರ್ನಿಂದ ನಾಶಮಾಡಿದ್ದಾನೆ.
ಇದಾದ ಬಳಿಕ ಅಮ್ಮ ಮಗ ಸೇರಿ ಪೊಲೀಸ್ ಠಾಣೆಯಲ್ಲಿ ಮನೋಜ್ ಮಿಶ್ರಾ (42) ಕಾಣಿಸುತ್ತಿಲ್ಲ ಎಂದು ದೂರು ಸಲ್ಲಿಸಿದ್ದಾರೆ. ಘಟನೆ ನಡೆದ ಮೂರು ವಾರಗಳ ಬಳಿಕ ಮನೋಜ್ ಶವ ಪೊಲೀಸರಿಗೆ ಸಿಕ್ಕಿದೆ. ಕನ್ನಡಕದಿಂದ ಇದು ಮನೋಜ್ ಶವ ಎಂದು ಆತನ ಸಹೋದ್ಯೋಗಿಗಳು ಪತ್ತೆ ಹಚ್ಚಿದ್ದಾರೆ. ಮನೋಜ್ ಭಗವದ್ಗೀತೆ ಉಪದೇಶ ನೀಡಲು ಊರಿಂದ ಊರಿಗೆ ತೆರಳುತ್ತಿದ್ದಿದ್ದರಿಂದ ಆತ ನಾಪತ್ತೆಯಾಗಿರುವ ಬಗ್ಗೆ ಬಹುತೇಕರಿಗೆ ತಿಳಿದಿರಲಿಲ್ಲ.
ಇನ್ನು ಪೊಲೀಸರ ವಿಚಾರಣೆಗೆ ಹಾಜರಾಗುವ ಪ್ರತಿ ಸಂದರ್ಭದಲ್ಲಿಯೂ ಯುವಕ ತಪ್ಪಿಸಿಕೊಳ್ಳುತ್ತಿದ್ದ. ಅಲ್ಲದೇ ಪೊಲೀಸರು ಪ್ರಶ್ನಿಸುತ್ತಿದ್ದಂತೆ ಯಾವ ಕಲಂ ಅಡಿ ಪ್ರಶ್ನಿಸಲಾಗುತ್ತಿದೆ ಎಂದು ಕೇಳುತ್ತಿದ್ದ. ಈತನ ನಡುವಳಿಕೆಯಲ್ಲಿ ಅನುಮಾನ ಬಂದು ಮೊಬೈಲ್ ಪರೀಕ್ಷಿಸಿದಾಗ ಈತ ನೂರು ಬಾರಿ ಕ್ರೈಂ ಪೆಟ್ರೋಲ್ ಧಾರಾವಾಹಿ ನೋಡಿರುವುದು ಬೆಳಕಿಗೆ ಬಂದಿದೆ.
ಬಳಿಕ ಪೊಲೀಸರ ಮುಂದೆ ಅಸಲಿ ವಿಷಯ ಬಾಯ್ಬಿಟ್ಟಿದ್ದಾನೆ. ಪ್ರಕರಣ ಸಂಬಂದ ಕ್ಲಾಸ್ 12ನಲ್ಲಿ ಓದುತ್ತಿದ್ದ ಯುವಕ ಮತ್ತು ಸಾಕ್ಷ್ಯನಾಶಕ್ಕೆ ಸಹಾಯ ಮಾಡಿದ ತಾಯಿಯನ್ನು ಬಂಧಿಸಲಾಗಿದೆ. ಇನ್ನು ಮನೋಜ್ಗೆ 11 ವರ್ಷದ ಮಗಳಿದ್ದು, ಆಕೆಯನ್ನು ಬಂಧಿಸಿದ್ದಾರೆ.
Comments are closed.