ಕರಾವಳಿ

ಮಠ, ಮಂದಿರಗಳು ನಮ್ಮ ಸನಾತನವಾದ ಸಂಸ್ಕೃತಿಯ ಪ್ರತೀಕ : ಡಾ. ಶ್ರೀ ವಿಶ್ವಸಂತೋಷ ಭಾರತಿ ಸ್ವಾಮೀಜಿ

Pinterest LinkedIn Tumblr

ಮಂಗಳೂರು: ಗ್ರಾಮೀಣ ಪ್ರದೇಶದಲ್ಲಿನ ಶ್ರೀ ಉಮಾ ಮಹೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಒಂದು ಉತ್ತಮವಾದ ಗೋಪುರ ನಿರ್ಮಣವಾಗಿರುವುದು ಅಭಿನಂದನೀಯ ಎಂದು ಶ್ರೀ ಕ್ಷೇತ್ರ ಬಾರಕೂರು ಮಹಾ ಸಂಸ್ಥಾನದ ವಿದ್ಯಾವಾಚಸ್ಪತಿ ಡಾ. ಶ್ರೀ ವಿಶ್ವಸಂತೋಷ ಭಾರತಿ ಸ್ವಾಮೀಜಿ ಹೇಳಿದರು.

ಅವರು ಉಳೆಪಾಡಿ ಶ್ರೀ ಉಮಾ ಮಹೇಶ್ವರ ಮಹಾಗಣಪತಿ ದೇವಸ್ಥಾನದ ಬಳಕುಂಜೆ ಕೊಟ್ನಾಯಗುತ್ತು ಬಸ್ ನಿಲ್ದಾಣದ ಬಳಿ ನೂತನವಾಗು ನಿರ್ಮಾಣಗೊಂಡಿರುವ ಬಳಕುಂಜೆ ಚೆನ್ನಯ ಬೆನ್ನಿ ದಿ. ನೇತ್ರಾವತಿ ಶೆಡ್ತಿ ಮತ್ತು ದಿ. ಭೋಜ ಶೆಟ್ಟಿ ದಂಪತಿಗಳ ಸ್ಮರಣಾರ್ಥ ಅವರ ಪುತ್ರ ಡಾ| ವಿರಾರ್ ಶಂಕರ ಬಿ. ಶೆಟ್ಟಿ ಸೇವಾ ರೂಪವಾಗಿ ನಿರ್ಮಾಣಗೊಂಡ ಸ್ವಾಗತ ಮಹಾ ದ್ವಾರದ ಉದ್ಘಾಟನಾ ಸಮಾರಂಭದಲ್ಲಿ ಮಾತಾನಾಡಿದರು.

ಮಠ, ಮಂದಿರಗಳು ನಮ್ಮ ಸನಾತನವಾದ ಸಂಸ್ಕೃತಿಯ ಪ್ರತೀಕವಾಗಿದೆ ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವ ಕೆಲಸ ಆಗಬೇಕು ಎಂದು ಸ್ವಾಮೀಜಿ ಹೇಳಿದರು.

ಗುರುಪುರ ವಜ್ರಹೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ನಮ್ಮ ಹಿಂದೂ ಸಂಸ್ಕೃತಿ ಹಿಂದೂ ಧರ್ಮ ನಮ್ಮ ಸಂಸ್ಕೃತಿ , ಆಚರಣೆಗಳು ದೇವಸ್ಥಾನಗಳಿಂದ ಉಳಿದಿದೆ ಈ ನಿಟ್ಟಿನಲ್ಲಿ ಮುಂಬಯಿ ಉದ್ಯಮಿಗಳಿಂದ ನಮ್ಮ ಉಭಯ ಜಿಲ್ಲೆಯ ದೇವಸ್ಥಾನಗಳ ಅಭಿವೃದ್ಧಿಗೆ ದೊಡ್ದ ಕೊಡುಗೆ ನೀಡಿದ್ದಾರೆ ಎಂದರು,

ದಾನಿಗಳಾದ ವಿರಾರ್ ಶಂಕರ ಶೆಟ್ಟಿ ಮಾತನಾಡಿ ದೇವರ ಪ್ರೇರಣೆಯಂತೆ ಈ ಕಾರ್ಯವಾಗಿದೆ, ಸಾಮಾಜಿಕ ಕಾರ್ಯಗಳು ನಿರಂತರ ಮುಂದುವರಿಯಲಿದೆ ಎಂದರು.

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಮ್ . ಮೋಹನ್ ಆಳ್ವ ಅವರ ಅಧ್ಯಕ್ಷತೆ ವಹಿಸಿದರು. ಮೂಲ್ಕಿ ಸೀಮೆಯ ಆರಸರಾದ ದುಗ್ಗಣ ಸಾವಂತರು ಉದ್ಘಾಟಿಸಿ ಶುಭ ಹಾರೈಸಿದರು.

ಕಟೀಲಿನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ , ಶಾಸಕ ಉಮಾನಾಥ ಕೋಟ್ಯಾನ್, ಚೇಳೂರು ಚರ್ಚ್‌ನ ಫಾ| ಮೈಕಲ್ ಡಿಸಿಲ್ವಾ , ಧರ್ಮದರ್ಶಿ ಹರಿಕೃಷ್ಣ ಪುನರೂರು, ಮುಂಡ್ಕೂರ ದೇವಸ್ಥಾನದ ಅರ್ಚಕ ಅಪ್ಪಣ್ ಭಟ್, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ , ಮುಂಬಯಿ ಹೋಟೆಲ್ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಕಳತ್ತೂರು ವಿಶ್ವನಾಥ ಶೆಟ್ಟಿ , ಬೆಂಗಳೂರು ಉದ್ಯಮಿ ರಾಮಪ್ರಸಾದ್ ಭಟ್, ಬಳಕುಂಜೆ ಗುತ್ತು ನಾರಾಯಣ ಮಾಣಾಯಿ, ವೀರೇಂದ್ರ ಪೂಂಜಾ ಕೋಟ್ನಾಯ ಗುತ್ತು, ಹರಿಶ್ವಂದ್ರ ಶೆಟ್ಟಿ ಕರ್ನಿರೆ ಗುತ್ತು, ಕೃಷ್ಣ ಶೆಟ್ಟಿ ಪಡ್ದಣ ಗುತ್ತು ಉಳೆಪಾಡಿ, ಚಿತ್ತರಂಜನ್ ಶೆಟ್ಟಿ ಮೂಡು ಕೋಟ್ನಾಯ ಗುತ್ತು, ಮೂಲ್ಕಿ ವಿಜಯ ರೈತರ ಬ್ಯಾಂಕ್ ಅಧ್ಯಕ್ಷ ರಂಗನಾಥ ಶೆಟ್ಟಿ , ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಪ್ರೀಡಾ ರೋಡ್ರಿಗಸ್, ಮಾಜಿ ತಾ. ಪಂ ಸದಸ್ಯ ನೆಲ್ಸನ್ ಲೋಬೋ ಉಪಸ್ಥಿರಿದ್ದರು.

ಚಿತ್ತರಂಜನ್ ಶೆಟ್ಟಿ ಪಡ್ಡಣಗುತ್ತು ಪ್ರಸ್ತಾವನೆಗೈದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ರಾಜೇಶ್ ಶೆಟ್ಟಿ ಉಳೆಪಾಡಿ ಸ್ವಾಗತಿಸಿದರು. ದಿನಕರ ಶೆಟ್ಟಿ ಬಳ್ಕುಂಜೆ ಕಾರ್ಯಕ್ರಮ ನಿರೂಪಿಸಿದರು.

Comments are closed.