
ಹೈದರಾಬಾದ್: ಹೆಂಡತಿಯ ಆಕ್ರಮ ಸಂಬಂಧಕ್ಕೆ ಬೇಸತ್ತ ಗಂಡನೊಬ್ಬ ಆಕೆಯ ರುಂಡ ಕತ್ತರಿಸಿ ಪ್ರಿಯಕರನ ಮನೆಗೆ ತಂದಿಟ್ಟ ಘಟನೆ ನಡೆದಿದೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಅನಂತಸಾಗರ್ ಗ್ರಾಮದಲ್ಲಿ ವಾಸವಿದ್ದ ಜುರ್ರು ಸಾಹಿಲು ಎಂಬ ವ್ಯಕ್ತಿ ತನ್ನ ಪತ್ನಿ 35 ವರ್ಷದ ಅಂಶಮ್ಮ ಎಂಬಾಕೆಯ ರುಂಡವನ್ನು ಕತ್ತರಿಸಿದ್ದಾರೆ.
ನಂತರ ಆ ರುಂಡವನ್ನು ಬೈಕ್ ನಲ್ಲಿ ಐದು ಕಿ.ಮೀ ದೂರದಲ್ಲಿರುವ ನಾರಾಯಣ್ ಖೇಡ್ ಗ್ರಾಮದಲ್ಲಿ ಅಂಶಮ್ಮ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯ ಮನೆಯ ಬಾಗಿಲ ಮುಂದೆ ಇಟ್ಟು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜರ್ರು ಸಾಹಿಲುಗೆ ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನವಿತ್ತು. ಈ ಸಂಬಂಧ ಗಂಡ-ಹೆಂಡತಿಯ ನಡುವೆ ಪ್ರತಿನಿತ್ಯ ಜಗಳವಾಗುತ್ತಿತ್ತು. ಕಳೆದ ಬುಧವಾರ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ದೊಡ್ಡ ಜಗಳವಾಗಿದೆ. ನಂತರ ಕೋಪಗೊಂಡ ಜುರ್ರು ಕೊಡಲಿಯಿಂದ ಪತ್ನಿಯ ಕತ್ತನ್ನು ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.