
ಮಂಗಳೂರು,ಆಕ್ಟೋಬರ್.17: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ.17ರಿಂದ ಅ.26ರವರೆಗೆ ನಡೆಯಲಿರುವ ಮಂಗಳೂರು ದಸರಾ ಮಹೋತ್ಸವದಲ್ಲಿ ಪ್ರತಿನಿತ್ಯ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಸಾಂಸ್ಕೃತಿಕ ಕಾರ್ಯಕ್ರಮ ವರ್ಚುವಲ್ ಮಾದರಿಯಲ್ಲಿ ಜಯ ಸಿ. ಸುವರ್ಣ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಇವುಗಳನ್ನು ನೇರ ವೀಕ್ಷಣೆಗೆ ಅವಕಾಶವಿಲ್ಲ. ಕಾರ್ಯಕ್ರಮವನ್ನು ದೇವಸ್ಥಾನ ಪ್ರಾಂಗಣದಲ್ಲಿ ಎಲ್‌ಇಡಿ ಸ್ಕ್ರೀನ್‌ಗಳನ್ನು ಹಾಕಿ ಹಾಗೂ ನಮ್ಮ ಕುಡ್ಲ ವಾಹಿನಿ ಮುಖಾಂತರ ನೇರ ಪ್ರಸಾರ ಮಾಡಲಾಗುವುದು ಎಂದು ದೇವಳದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.

ಅ.18ರಂದು ಸಂಜೆ 5.30ರಿಂದ ತನುಶ್ರೀ ಪಿತ್ರೋಡಿ ಉಡುಪಿ ಇವರಿಂದ ಯೋಗ ನೃತ್ಯ ಭರತನಾಟ್ಯ, 6.00ರಿಂದ ಶ್ರೀಧರ ಪೂಜಾರಿ ಮತ್ತು ಬಳಗದವರಿಂದ ಬೆಳ್ತಂಗಡಿ ಅವರಿಂದ ಸ್ಯಾಕ್ಸೋಫೋನ್ ವಾದನ, ಸಂಜೆ 6.30ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಸಾಂಸ್ಕೃತಿಕ ವೇದಿಕೆ, ಕುಳಾಯಿ ಇವರಿಂದ ದೇಶದ ಬೀರೆರ ದೇಶದ ಸಂಸ್ಕೃತಿಯ ಪ್ರತಿಬಿಂಬ, ನಿರ್ದೇಶನ ನಾಗೇಶ್ ಕುಲಾಲ್, ಕುಳಾಯಿ, ನಿರೂಪಣೆ: ದಯಾನಂದ ಜಿ. ಕತ್ತಲ್‌ಸಾರ್,
ಅ.19ರಂದು ಸಂಜೆ 6.00 ಬಿಲ್ಲವ ಸ್ವರ ಸಂಗಮ ಮಂಗಳೂರು ಇವರಿಂದ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ ಹಾಗೂ ದೇಶ ಭಕ್ತಿಗೀತೆ ಕಾರ್ಯಕ್ರಮ, ಅ.20ರಂದು ಸಂಜೆ 6ರಿಂದ ನೃತ್ಯ ಲಹರಿ ನಾಟ್ಯಾಲಯದ ವಿದೂಷಿ ರೇಷ್ಮಾ ನಿರ್ಮಲ್ ಭಟ್ ಮತ್ತು ಶಿಷ್ಯರಿಂದ ನೃತ್ಯ ಸಂಭ್ರಮ,
ಅ.21ರಂದು ಸಂಜೆ 6.00ರಿಂದ ಶ್ರಾವ್ಯ ಮತ್ತು ಪ್ರತೀಕ್ಷಾ ಇವರಿಂದ ಭರತನಾಟ್ಯ, ಅ.7.00ರಿಂದ ಗಂಟೆಗೆ ಸಪ್ತಸ್ವರ ಆರ್ಕೇಸ್ಟ್ರಾದ ಪ್ರಭಾಕರ್ ತಣ್ಣೀರು ಬಾವಿ ಮತ್ತು ಬಳಗದವರಿಂದ ಭಕ್ತಿ ರಸಮಂಜರಿ ನಡೆಯಲಿದೆ.
ಅ.22ರಿಂದ ಸಂಜೆ 6.30ಕ್ಕೆ ಯಕ್ಷಕೀರ್ತಿ ಬಳಗದವರಿಂದ ಕೋಟಿ ಚೆನ್ನಯ್ಯ ತುಳು ಯಕ್ಷಗಾನ ತಾಳಮದ್ದಳೆ,
ಅ.23ರಂದು ಸನಾತನ ನಾಟ್ಯಲಯದ ವಿದೂಷಿ ಶಾರದ ಮಣಿಶೇಖರ್ ಮತ್ತು ವಿದೂಷಿ ಶ್ರೀಲತಾ ನಾಗರಾಜ ಪ್ರಸ್ತುತಿಯಲ್ಲಿ ಸನಾತನ ರಾಷ್ಟ್ರಾಂಜಲಿ,
ಅ.24ರಂದು ಸಂಜೆ 6.00ಕ್ಕೆ ವಿದ್ವಾನ್ ವೆಂಕಟಕೃಷ್ಣ ಭಟ್ ಮತ್ತು ಶಿಷ್ಯೆ ರಕ್ಷಾ ಎಸ್.ಹೆಚ್. ಪೂಜಾರಿ ಯವರಿಂದ ಭಕ್ತಿ ಗಾನಾರ್ಚನೆ,
ಅ.25ರಂದು ಸಂಜೆ 6.00ಕ್ಕೆ ವಿದೂಷಿ ಮಂಜುಳಾ ಸುಬ್ರಹ್ಮಣ್ಯ ಪುತ್ತೂರು ಬಳಗದವರಿಂದ ನೃತ್ಯ ಲಹರಿ ನಡೆಯಲಿದೆ ಎಂದು ಪದ್ಮರಾಜ್ ಆರ್. ತಿಳಿಸಿದ್ದಾರೆ.
Comments are closed.