ಮನೋರಂಜನೆ

ನಟಿ ಸೌಂದರ್ಯ ಪಾತ್ರದಲ್ಲಿ ನಟಿಸುತ್ತಿರುವವರು ಯಾರು ಗೊತ್ತಾ?

Pinterest LinkedIn Tumblr


ಬೆಂಗಳೂರು: ನಟಿ ದಿವಂಗತ ಸೌಂದರ್ಯ ಜೀವನ ಚರಿತ್ರೆ ಕುರಿತು ಬಯೋಪಿಕ್ ಟಾಲಿವುಡ್​ನಲ್ಲಿ ತಯಾರಾಗುತ್ತಿದೆ. ಈ ನಟಿಯ ಪಾತ್ರದಲ್ಲಿ ಯಾರು ಅಭಿನಯಿಸಲಿದ್ದಾರೆ ಗೊತ್ತಾ..?

ಸೌಂದರ್ಯ ಹೆಸರಿಗೆ ತಕ್ಕಂತೆ ಈಕೆ ಸೌಂದರ್ಯದ ದೇವತೆ..ರೂಪ, ಗುಣ, ಅಭಿರುಚಿ, ಘನತೆ, ಸಜ್ಜನಿಕೆ ಹೀಗೆ‘ಸಕಲಗುಣ ಸೌಂದರ್ಯವತಿ ಯಾಗಿ’ ಶೋಭಿಸಿದವರು ಈ ಅರಗಿಣಿ. ಮುದ್ದು ಮುದ್ದು ಮುಖ, ಬಟ್ಟಲು ಕಣ್ಣು,ನೀಳವಾದ ಮೂಗು, ಎಲ್ಲರನ್ನೂ ಬಲು ಬೇಗ ಆಕರ್ಷಿಸಿತ್ತು. ಸೌಂದರ್ಯಾ ನಮ್ಮಿಂದ ಮರೆಯಾಗಿ ಸುಮಾರು 16 ವರ್ಷಗಳೇ ಕಳೆದಿದೆ. ಆದ್ರೆ ಈಗಲೂ ಸೌಂದರ್ಯನ ತೆರೆ ಮೇಲೆ ನೋಡಿದ್ರೆ ಎಲ್ಲಾ ಹುಚ್ಚೆದ್ದು ಕುಣಿಯುತ್ತಾರೆ.

ನಿಜ ಸೌಂದರ್ಯದಂಥ ಸಿಂಪಲ್​ ಬ್ಯೂಟಿ, ಒಂದು ಕಾಲದಲ್ಲಿ ಸಿನಿ ಇಂಡಸ್ಟ್ರೀಯನ್ನ ಆಳಿದ್ರು. ಶಾರ್ಟ್​ ಟೈಂನಲ್ಲಿ ದೊಡ್ಡ ದೊಡ್ಡ ಹೀರೋಗಳ ಜೊತೆ ಆ್ಯಕ್ಟ್​​ ಮಾಡಿರುವ ಸೌಂದರ್ಯ, ತುಂಬಾ ಚಿಕ್ಕ ವಯಸ್ಸಿನಲ್ಲಿ ವಿಧಿವಶರಾದ್ರು..

ಸೌತ್​ ಸಿನಿರಂಗದ ಖ್ಯಾತ ನಟಿ ಸೌಂದರ್ಯ ಬಯೋಪಿಕ್ ಗೆ ಸಿದ್ಧತೆ ನಡೆಯುತ್ತಿದೆ. ತೆಲುಗು ನಿರ್ಮಾಪಕರೊಬ್ಬರು ಸೌಂದರ್ಯ ಬಯೋಪಿಕ್ ನಿರ್ಮಾಣ ಮಾಡಲು ರೆಡಿಯಾಗಿದ್ದು, ಸೌಂದರ್ಯ ಕುಟುಂಬದ ಜೊತೆ ಮಾತುಕತೆ ನಡೆಸುತ್ತಿದ್ದಾರಂತೆ. ಕುಟುಂಬದ ಒಪ್ಪಿಗೆಗೆ ಕಾಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ನಿರ್ಮಾಪಕರು ಮಾತ್ರ ಸೌಂದರ್ಯ ಬಯೋಪಿಕ್​ಗೆ ಯಾರು ಸೂಟಾಗ್ತಾರೆ ಅನ್ನೊ ಹುಡುಕಾಟ ನಡೆಸಿದ್ದಾರೆ.

ಟಾಲಿವುಡ್​, ಕಾಲಿವುಡ್​, ಮಾಲಿವುಡ್​ನಲ್ಲಿ ಮಿಂಚುತ್ತಿರುವ ಸಾಯಿ ಪಲ್ಲವಿ ಸೌಂದರ್ಯ ಆಗಲಿದ್ದಾರೆ. ಅಂದ್ಹಾಗೇ ಸಾಯಿಪಲ್ಲವಿಗೂ ಸೌಂದರ್ಯಗೂ ಒಳ್ಳೆಯ ಲಿಂಕ್​ ಇದೆ, ಸೌಂದರ್ಯ ಸಿಂಪಲ್​ ಬ್ಯೂಟಿ, ಹಾಗೇ ಸಾಯಿಪಲ್ಲವಿ ಕೂಡ ಸಿಂಪಲ್​ ಬ್ಯೂಟಿ, ಹಾಗೇ ಆ್ಯಕ್ಟಿಂಗ್​ ವಿಷಯದಲ್ಲೂ ಈ ಇಬ್ಬರು ನಟಿಯರು ಸೂಪರೋ ಸೂಪರ್​.

ಸೌಂದರ್ಯಗೂ ಸಾಯಿಪಲ್ಲವಿಗೂ ಇಷ್ಟೆಲ್ಲಾ ಹೋಲಿಕೆಗಳಿರೋದ್ರಿಂದ, ಮೊಡವೆಗಳಿಂದ್ಲೇ ಎಷ್ಟೋ ಹುಡುಗರಿಗೆ ಹುಚ್ಚು ಹಿಡಿಸಿದ ನಾಯಕಿ ಸಾಯಿಪಲ್ಲವಿನಾ ಈ ಬಯೋಪಿಕ್​ಗೆ ಚ್ಯೂಸ್​ ಮಾಡಲಾಗಿದೆ. ಈಗಾಗಲೇ ಸಾಯಿ ಪಲ್ಲವಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಬಯೋಪಿಕ್ ನಲ್ಲಿ ನಟಿಸಲು ಸಾಯಿ ಪಲ್ಲವಿ ಸಹ ಆಸಕ್ತರಾಗಿದ್ದು, ಸದ್ಯದಲ್ಲೇ ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸದಾ ಹೊಸತನಕ್ಕೆ ತುಡಿಯೋ ಸಾಯಿಪಲ್ಲವಿ, ಸೌಂದರ್ಯ ಆಗಿ ಸಿನಿ ಪ್ರಿಯರಿಗೆ ಯಾವ ರೀತಿ ಮೋಡಿ ಮಾಡಲಿದ್ದಾರೆ ಅನ್ನೋದನ್ನ ನೋಡಲು ಎಲ್ಲರು ಕಾತುರದಿಂದ ಕಾಯ್ತಿದ್ದಾರೆ.

Write A Comment