ಮನೋರಂಜನೆ

ಮುಂಬೈಯಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ನಿವಾಸದ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು !

Pinterest LinkedIn Tumblr

ಡ್ರಗ್ ಪ್ರಕರಣ ತನಿಖೆ ಚುರುಕುಗೊಂಡಿದ್ದು, ಈಗ ಮುಂಬೈಯ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮನೆಯ ವರಗೆ ಬಂದಿದೆ. ಇಂದು ಬೆಂಗಳೂರು ಕೇಂದ್ರ ಅಪರಾಧ ಶಾಖೆ (ಸಿಸಿಬಿ) ಪೊಲೀಸರು ವಿವೇಕ್ ಒಬೆರಾಯ್ ಅವರ ಮನೆಯ ಮೇಲೆ ದಾಳಿ ಮಾಡಿದ್ದಾರೆ.

ವಿವೇಕ್ ಅವರ ಸಂಬಂಧಿಯಾಗಿರುವ ಆದಿತ್ಯ ಅಳ್ವಾ ಬೆಂಗಳೂರು ಡ್ರಗ್ಸ್ ಪ್ರಕರಣದ ಆರೋಪಿ. ಆತನನ್ನು ಹುಡುಕಿಕೊಂಡು ಪೊಲೀಸರು ವಿವೇಕ್ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಆದಿತ್ಯ ವಿರುದ್ಧ ಪ್ರಕರಣ ದಾಖಲಾದಾಗಿನಿಂದ ಆತ ತಲೆಮರೆಸಿಕೊಂಡಿದ್ದಾನೆ. ಇಂದು ಸಿಸಿಬಿ ನ್ಯಾಯಾಲಯದ ವಾರಂಟ್‌ನೊಂದಿಗೆ ವಿವೇಕ್ ಅವರ ಮನೆಯಲ್ಲಿ ಹುಡುಕಾಟ ನಡೆಸಿದೆ.

ಸಿಸಿಬಿ ಹೊರಡಿಸಿದ ಹೇಳಿಕೆಯ ಪ್ರಕಾರ, ಕಾಟನ್‌ಪೇಟೆ ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವಾ ಬೇಕಾಗಿದ್ದು ಆತ ತಲೆಮರೆಸಿಕೊಂಡಿದ್ದಾನೆ. ವಿವೇಕ್ ಒಬೆರಾಯ್ ಅವರ ಸಂಬಂಧಿಯಾಗಿರುವ ಆಳ್ವಾಗೆ ಆಶ್ರಯ ನೀಡೀದ್ದಾರೆಂಬ ಮಾಹಿತಿ ಇದ್ದು ಅದಕ್ಕಾಗಿ ನಾವು ಒಬೆರಾಯ್ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಇದಕ್ಕಾಗಿ ನ್ಯಾಯಾಲಯದಿಂದ ವಾರಂಟ್ ತೆಗೆದುಕೊಂಡು ಸಿಸಿಬಿ ತಂಡ ಮುಂಬೈನ ಅವರ ಮನೆಗೆ ತೆರಳಿದೆ.

ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಅನೇಕ ದೊಡ್ಡದೊಡ್ಡ ಹೆಸರುಗಳು ಕೇಳಿ ಬಂದಿದೆ. ಅವುಗಳಲ್ಲಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸಹ ಇದ್ದಾರೆ.

ಮೂಲಗಳ ಪ್ರಕಾರ, ಕಳೆದ ಒಂದು ತಿಂಗಳಿನಿಂದ ಪೊಲೀಸರು ಮಾದಕ ದ್ರವ್ಯ ಸೇವಿಸುವವರು, ಸರಬರಾಜುದಾರರು ಮತ್ತು ಪಾರ್ಟಿ ಆಯೋಜಕರ ವಿರುದ್ಧ ತನಿಖೆ ಕೈಗೊಂಡಿದ್ದಾರೆ.

ಸಿಸಿಬಿ ತಂಡ ಈ ಮೊದಲು ಆದಿತ್ಯ ಮನೆಯ ಮೇಲೆ ಸಹ ದಾಳಿ ಮಾಡಿತ್ತು. ಹೆಬ್ಬಾಳದ ಸಮೀಪವಿರುವ ಆದಿತ್ಯ ಮನೆ ‘ಹೌಸ್ ಆಫ್ ಲೈವ್ಸ್ ಅನ್ನು ಶೋಧಿಸಲಾಗಿದೆ. ಈ ಆದಿತ್ಯ ಆಳ್ವಾ ಮಾಜಿ ಸಚಿವ ಜೀವರಾಜ್ ಅಳ್ವಾ ಅವರ ಪುತ್ರ. ಈತ ದೊಡ್ಡ ದೊಡ್ಡ ಪಾರ್ಟಿಗಳನ್ನು ನಡೆಸುತ್ತಿದ್ದನು ಎನ್ನಲಾಗಿದೆ. ಇವರ ಸಹೋದರಿ ಪ್ರಿಯಾಂಕಾ ಆಳ್ವಾ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರನ್ನು ಮದುವೆಯಾಗಿದ್ದರು.

Comments are closed.