
ಬೆಂಗಳೂರು: ಹೆಂಡತಿಯ ಜನನಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟು ಗಂಡನೊಬ್ಬ ಪರಾರಿಯಾಗಿರುವ ಘಟನೆ ರಾಮಮೂರ್ತಿ ನಗರದ ಟಿಸಿ ಪಾಳ್ಯದಲ್ಲಿ ನಡೆದಿದೆ.
ಪರಾರಿಯಾಗಿರುವ ಆರೋಪಿ ಪತಿಯನ್ನು ಸೂರಜ್ ಸಿಂಗ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಪತ್ನಿ ಆಸ್ಪತ್ರೆಯಲ್ಲಿ ಜೀವನ್ಮರಣ ನಡುವೆ ಹೋರಾಟ ಮಾಡುತ್ತಿದ್ದಾರೆ.
ಗೃಹಿಣಿ ಮಾಲಾಳಿಗೆ ವರದಕ್ಷಿಣೆಗಾಗಿ ಪತಿ ಬೆಂಕಿ ಹಚ್ಚಿ ಹತ್ಯೆಗೆ ಮುಂದಾಗಿದ್ದಾನೆ. ಗಂಭೀರ ಗಾಯಕ್ಕೊಳಗಾಗಿರುವ ಮಹಿಳೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಲ ಮೂಲತಃ ಉತ್ತರ ಪ್ರದೇಶದವರು. ಕಳೆದ ಒಂದು ವರ್ಷದ ಹಿಂದೆ ಸೂರಜ್ ಸಿಂಗ್ ಎಂಬಾತನ ಜೊತೆ ವಿವಾಹವಾಗಿದ್ದರು. ಪತಿ, ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೇ ಮನೆಯಲ್ಲಿ ಒಂಟಿಯಾಗಿದ್ದ ಮಾಲ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದಾನೆ.
ಮಾಲಳ ಹೊಟ್ಟೆ ಹಾಗೂ ಗುಪ್ತಾಂಗಕ್ಕೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Comments are closed.