ರಾಷ್ಟ್ರೀಯ

ಇಎಂಐ ಅವಧಿ ವಿಸ್ತರಣೆ ಸಾಧ್ಯವಿಲ್ಲ: ಸುಪ್ರೀಂಗೆ ಆರ್ ಬಿಐ

Pinterest LinkedIn Tumblr


ನವದೆಹಲಿ: ಇಎಂಐ (ಸಾಲದ ಕಂತು ಮುಂದೂಡಿಕೆ) ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಆರ್ ಬಿಐ ಸುಪ್ರೀಂಗೆ ತಿಳಿಸಿದೆ.

ಸಾಲದ ಕಂತು ಪಾವತಿ ಅವಧಿಯನ್ನು ವಿಸ್ತರಿಸಿದರೆ ಆರ್ಥಿಕತೆಯಲ್ಲಿ ಸಾಲದ ಸೃಷ್ಟಿ ಹೆಚ್ಚಾಗುವಂತೆ ಆಗಲಿದೆ ಎಂದು ಆರ್ ಬಿಐ ಸುಪ್ರೀಂ ಕೊರ್ಟ್ ಗೆ ನೀಡಿರುವ ಪ್ರಮಾಣ ಪತ್ರದಲ್ಲಿ ಕಾರಣ ತಿಳಿಸಿದೆ.

ಆ.06 ರಂದು ರೆಸೆಲ್ಯೂಷನ್ ಫ್ರೇಮ್ ವರ್ಕ್ ನ್ನು ರಿಸರ್ವ್ ಬ್ಯಾಂಕ್ ಘೋಷಿಸಿದ್ದು, ಕೋವಿಡ್-19 ನಿಂದಾಗಿ ಆರ್ಥಿಕವಾಗಿ ಕುಸಿದಿರುವ ರಿಯಲ್ ಸೆಕ್ಟರ್ ಆಕ್ಟಿವಿಟೀಸ್ ನ ಉತ್ತೇಜನದೆಡೆಗೆ ಗುರಿ ಹೊಂದಿದೆ ಹಾಗೂ ಅಂತಿಮವಾಗಿ ಸಾಲ ಪಡೆಯುವವರಿಗೆ ಉಂಟಾಗುವ ಪರಿಣಾಮಗಳನ್ನು ತಗ್ಗಿಸುವುದಾಗಿದೆ. ಈ ನಿಟ್ಟಿನಲ್ಲಿ ಅಂತಹ ಸಾಲಗಾರರ ಖಾತೆಗಳು ಮಾತ್ರ ರೆಸೆಲ್ಯೂಷನ್ ಗೆ ಅರ್ಹರಾಗಿರುತ್ತಾರೆ, ಆದರೆ 30 ದಿನಗಳಿಗೂ ಮೀರಿದ ಸುಸ್ತಿದಾರರಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಆರ್ ಬಿಐ ತಿಳಿಸಿದೆ.

ಸಂಬಂಧಿಸಿದ ಕ್ಷೇತ್ರಗಳ ಉದ್ಯಮಿಗಳಿಗೆ ಸಾಲ ನೀಡುವಾಗ ಈ ಸಾಲ ಪುನರ್​​ ರಚನೆ ಮಾರ್ಗಸೂಚಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಬ್ಯಾಂಕುಗಳಿಗೆ ಸಮಿತಿ ಶಿಫಾರಸುಗಳನ್ನು ಪರಿಗಣಿಸಲಾಗುವುದು ಎಂದೂ ಆರ್ ಬಿಐ ಪ್ರಮಾಣಪತ್ರದಲ್ಲಿ ಹೇಳಿದೆ.

ಕೋವಿಡ್-19 ಬಿಕ್ಕಟ್ಟಿನಿಂದ ಭಾರತದ ಆರ್ಥಿಕತೆ ಕ್ಷೀಣಿಸುತ್ತಿದೆ. ಹೀಗಾಗಿ ಯಾವುದೇ ಬ್ಯಾಂಕುಗಳು ಆರ್ಥಿಕತೆ ಒತ್ತಡಕ್ಕೆ ಸಿಲುಕಬಾರದು ಎಂದು ರಿಸರ್ವ್​​ ಬ್ಯಾಂಕ್​​ ಆಫ್​ ಇಂಡಿಯಾ(ಆರ್​ಬಿಐ) ರೆಸಲ್ಯೂಷನ್​​ವೊಂದನ್ನು ಸಿದ್ದಪಡಿಸಿದೆ. ಈ ರೆಸಲ್ಯೂಷನ್​​ ಫ್ರೇಮ್​​​ ವರ್ಕ್​ ಮಾಡುವ ಜವಾಬ್ದಾರಿಯನ್ನು ದೇಶದ ಹಿರಿಯ ಬ್ಯಾಂಕಿಂಗ್ ಉದ್ಯಮಿ ಕೆ.ವಿ. ಕಾಮತ್ ನೇತೃತ್ವದ ತಜ್ಞರ ಸಮಿತಿಗೆ ಹೊರಿಸಲಾಗಿತ್ತು. ಇದರ ಭಾಗವಾಗಿ ಕೆ.ವಿ ಕಾಮತ್​ ನೇತೃತ್ವದ ತಜ್ಞರ ಸಮಿತಿಯೂ 26 ಕ್ಷೇತ್ರಗಳ ಸಾಲ ಪುನರ್ ​​ರಚನೆ ಮಾಡಲು ಆಯ್ಕೆ ಮಾಡಿಕೊಂಡಿದೆ.

Comments are closed.