ಕುಂದಾಪುರ: ವಿಭಿನ್ನ ಮಾದರಿಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜುಗಾರಿಯಲ್ಲಿ ನಿರತರಾಗಿದ್ದ 7 ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ಸುಬ್ರಹ್ಮಣ್ಯ ಕೊಠಾರಿ (36), ಸಂತೋಷ ಶೆಟ್ಟಿ (26), ಕಿರಣ್ ಪೂಜಾರಿ( 19), ವಿವೇಕ ಶೆಟ್ಟಿ (29), ಅಕ್ಷಯ ಪೂಜಾರಿ(23), ಜಯ ಶೆಟ್ಟಿ(36), ಅಪ್ಸರ್ (25) ಬಂಧಿತ ಆರೋಪಿಗಳು.

ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಸಿದ್ದಾಪುರ ಮಾಕೇಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಈ ಬೆಟ್ಟಿಂಗ್ ನಡೆಸಲಾಗುತ್ತಿತ್ತು. ಶಂಕರನಾರಾಯಣ ಪಿಎಸ್ಐ ಶ್ರೀಧರ ನಾಯ್ಕ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.

ಸಿದ್ದಾಪುರ ಮಾಕೇಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗುಂಪುಗೂಡಿಕೊಂಡು ನಿನ್ನೆ ನಡೆಯುತ್ತಿದ್ದ ಐಪಿಎಲ್ ಮ್ಯಾಚ್ ಟೀಮ್‌ಗಳಾದ ಹೈದ್ರಾಬಾದ್ ಸನ್ ರೈಸರ್ ಹಾಗೂ ಕಿಂಗ್ಸ್ ಇಲೇವನ್ ಪಂಜಾಬ್ ಕ್ರಿಕೆಟ್ ಸ್ಕೋರ್‌ನ ಮೇಲೆ 0 ಯಿಂದ 9 ಸಂಖ್ಯೆ ಒಳಗೆ ಯಾವುದಾದರು ಸಂಖ್ಯೆಗೆ 200 ರೂ ಕಟ್ಟಿದರೆ, ಅದರ ವಿನ್ನಿಂಗ್ ನಂಬ್ರಕ್ಕೆ 1500 ರೂ ಕೊಡುವುದಾಗಿ ಹೇಳುತ್ತಾ ಹಣವನ್ನು ಪಣವಾಗಿರಿಸಿ ಕ್ರಿಕೆಟ್ ಬೆಟ್ಟಿಂಗ್ ಜುಗಾರಿ ಆಟ ಆಡುತ್ತಿದ್ದ ವೇಳೆ ಈ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್’ಗೆ ಬಳಸಿದ ಮೊಬೈಲ್ ಪೋನ್, 3,300 ರೂ. ನಗದು ಹಾಗೂ ಕ್ರಿಕೆಟ್ ಸ್ಕೋರ್ ಸಂಖ್ಯೆ ಬರೆದ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Comments are closed.