ಕರಾವಳಿ

ಸ್ವದೇಶಿ ಉತ್ಪನ್ನಗಳ ಬಳಕೆಯ ಪ್ರತಿಜ್ಞೆ ಹಾಗೂ ಆತ್ಮನಿರೀಕ್ಷಣೆಗಾಗಿ ಸತ್ಯಾಗ್ರಹ

Pinterest LinkedIn Tumblr

ಮಂಗಳೂರು : ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಿ ಜಯಂತಿಯ ಅಂಗವಾಗಿ ಯುವಾಬ್ರಿಗೇಡ್ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಮಂಗಳೂರಿನ ವಿಠೋಭ ದೇವಾಲಯದ ಆವರಣದಲ್ಲಿ ಒಂದು ದಿನದ ಸತ್ಯಾಗ್ರಹ ಮಾಡುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮ ಬೆಳಿಗ್ಗೆ 8 ರಿಂದ ಸಂಜೆ 4 ರ ವರೆಗೆ ಗಾಂಧೀ ಸಂದೇಶ ಸ್ವದೇಶಿ ಉತ್ಪನ್ನಗಳ ಬಳಕೆಯ ಪ್ರತಿಜ್ಞೆ ಹಾಗೂ ಸಾಧನೆ ತೋರಿದ ಜನರ ಸಂದೇಶಗಳನ್ನು ತಿಳಿಯುವ ಮೂಲಕ ಆಚರಿಸಲಾಯಿತು ಮತ್ತು ಸತ್ಯ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.ಈ ಸತ್ಯಾಗ್ರಹವು ಆತ್ಮನಿರೀಕ್ಷಣೆಯಾದಾಗಿದ್ದು, ಗಾಂಧೀಜಿಯವರ ಆಶಯದ ಈ ಸಂಕಲ್ಪಗಳನ್ನು ಜೀವನದಲ್ಲಿ ಅನುಸರಿಸುತ್ತೇನೆ ಎಂಬ ನಿಶ್ಚಯದೊಂದಿಗೆ ಕುಳಿತುಕೊಂಡು ಈ ಸಂಕಲ್ಪಗಳನ್ನು ಮಾಡಲಾಯಿತು.

ಸಂಕಲ್ಪ:

1.ರಾಷ್ಟ್ರದ ಕರೆ ಬಂದಾಗ ತನು-ಮನ-ಧನ ಎಲ್ಲವನ್ನೂ ಸಮರ್ಪಿಸುವೆ.
2. ರಾಷ್ಟ್ರ ವಿರೋಧಿ ಸಿದ್ಧಾಂತವನ್ನಾಗಲಿ ಅದರ ಸಮರ್ಥಕರನ್ನಾಗಲಿ ಎಂದಿಗೂ ಅನುಸರಿಸಲಾರೆ.
3. ರಾಮರಾಜ್ಯದ ಆದರ್ಶಗಳಿಗೆ ನಾನು ಬದ್ಧನಾಗಿರುತ್ತೆನೆ.
4. ಗೋಹತ್ಯೆಯನ್ನು ನಾನು ವಿರೋಧಿಸುತ್ತೇನೆ.
5. ಅಸ್ಪೃಶ್ಯತೆಯ ಆಚರಣೆ ನಾನು ಮಾಡುವುದಿಲ್ಲ, ಮಾಡುವವರನ್ನು ವಿರೋಧಿಸುತ್ತೇನೆ ಕೂಡ.
6. ನಾನು ಮಾದಕ ದ್ರವ್ಯಗಳ ದಾಸನಾಗುವುದಿಲ್ಲ.
7. ಗಾಂಧೀಜಿ ಪ್ರತಿಪಾದಿಸಿದ ಸ್ವಚ್ಛತೆಯ ಕುರಿತಂತೆ ಗಮನಹರಿಸಿ, ಸ್ವಚ್ಛಭಾರತ ನಿರ್ಮಾಣಕ್ಕಾಗಿ ಶ್ರಮಿಸುತ್ತೇನೆ.
8. ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಿಸಿ ಗ್ರಾಮೋದ್ಯೋಗಗಳಿಗೆ ಆಸರೆಯಾಗುತ್ತೇನೆ. Local ಗೆ ನಾನು vocal ಆಗುತ್ತೇನೆ ಮತ್ತು ಆತ್ಮನಿರ್ಭರ ಭಾರತಕ್ಕೆ ನನ್ನ ಬದುಕನ್ನು ಮೀಸಲಿಡುತ್ತೇನೆ ಎಂಬ ಸಂಕಲ್ಪವನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಹಾಗೂ ಯುವಾಬ್ರಿಗೇಡ್ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.