ರಾಷ್ಟ್ರೀಯ

ರಾಮಜನ್ಮಭೂಮಿ ಹೋ”ರಾಟಕ್ಕೆ ಸಿಕ್ಕ ಜಯ: ಎಲ್.ಕೆ. ಅಡ್ವಾಣಿ

Pinterest LinkedIn Tumblr


ಲಖನೌ: ಲಖನೌ ಸಿಬಿಐ ವಿಶೇಷ ನ್ಯಾ”ಯಾಲಯವು ನೀಡಿರುವ ಬಾ”ಬ್ರಿ ಮಸೀದಿ ಧ್ವಂ”ಸ ಪ್ರ”ಕರಣದ ಕುರಿತಾದ ತೀರ್ಪು ರಾಮಜನ್ಮಭೂಮಿ ಹೋ”ರಾಟಕ್ಕೆ ಸಿಕ್ಕಿ ಜಯ ಎಂದು ಎಲ್.ಕೆ. ಅಡ್ವಾಣಿ ಹೇಳಿದ್ದಾರೆ.

ಕೋರ್ಟ್ ತೀರ್ಪು ಹೊರಬಂದು ಜಯ ಸಿಗುತ್ತಿದ್ದಂತೆ ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಸಿಹಿತಿಂಡಿ ಹಂಚಿ ಸಂಭ್ರಮಪಟ್ಟರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಲ್ ಕೆ ಅಡ್ವಾಣಿ, ಬಾ”ಬ್ರಿ ಮಸೀದಿ ಧ್ವಂ”ಸ ಪ್ರ”ಕರಣದಲ್ಲಿ ನ್ಯಾ”ಯಾಲಯ ನೀಡಿರುವ ತೀರ್ಪನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ರಾಮಜನ್ಮಭೂಮಿ ಹೋ”ರಾಟದಲ್ಲಿ ನಾನು ವೈಯಕ್ತಿಕವಾಗಿ ಮತ್ತು ಬಿಜೆಪಿ ಇಟ್ಟಿರುವ ನಂಬಿಕೆ ಮತ್ತು ಬದ್ಧತೆಗೆ ಸಂದ ಜಯವಾಗಿದೆ ಎಂದು ಹೇಳಿದರು.

ಇನ್ನೊಂದೆಡೆ ಪ್ರತಿಕ್ರಿಯೆ ನೀಡಿದ ಮತ್ತೊಬ್ಬ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಷಿ, ಇದು ನ್ಯಾಯಾಲಯದ ಐತಿಹಾಸಿಕ ತೀರ್ಪು. ಅಯೋಧ್ಯೆಯಲ್ಲಿ 1992ರ ಡಿಸೆಂಬರ್ 6ರಂದು ನಡೆದ ಘಟನೆಗೆ ಯಾವುದೇ ಪಿ”ತೂರಿ ನಡೆಸಿರಲಿಲ್ಲ ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ. ನಮ್ಮ ಕಾರ್ಯಕ್ರಮ, ರ್ಯಾಲಿ ಯಾವುದೇ ಪಿ”ತೂರಿಯ ಭಾಗವಾಗಿರಲಿಲ್ಲ. ಇಂದು ನ್ಯಾಯಾಲಯದ ತೀರ್ಪು ನಮಗೆ ಖುಷಿ ಕೊಟ್ಟಿದೆ. ರಾಮ ಮಂದಿರ ನಿರ್ಮಾಣದತ್ತ ನಮ್ಮ ಸಂಪೂರ್ಣ ಗಮನವನ್ನು ಇನ್ನು ಹರಿಸೋಣ ಎಂದು ಹೇಳಿದ್ದಾರೆ.

Comments are closed.