ಹೊಸದಿಲ್ಲಿ: ದೇಶಾದ್ಯಂತ ಮಾರ್ಚ್ ನಲ್ಲಿ ಲಾಕ್ ಡೌನ್ ಘೋಷಣೆಯಾದಾಗ ಮುಚ್ಚಲ್ಪಟ್ಟಿರುವ ಶಾಲಾ ಹಾಗೂ ಕಾಲೇಜುಗಳನ್ನು ಹಂತ ಹಂತವಾಗಿ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಅಕ್ಟೋಬರ್ 15ರಿಂದ ಮಾರ್ಗಸೂಚಿಯ ಪ್ರಕಾರ ಹಂತ ಹಂತವಾಗಿ ಶಾಲಾ ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿದ್ದು, ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದು ಆಯಾ ರಾಜ್ಯಗಳು ಹಾಗೂ ಒಳಗೊಂಡಿರುವ ಸಂಸ್ಥೆಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದೆ.
ಶಾಲಾ ಕಾಲೇಜು ಆರಂಭದ ಬಗ್ಗೆ ಆಯಾ ರಾಜ್ಯವೇ ನಿರ್ಧಾರ ತೆಗೆದುಕೊಳ್ಳಬೇಕು, ಇದರ ಜೊತೆಗೆ ಶಾಲಾ ಕಾಲೇಜು, ಕೋಚಿಂಗ್ ಸಂಸ್ಥೆಗಳನ್ನು ತೆರೆಯುವ ಬಗ್ಗೆ ರಾಜ್ಯ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿ ತಿಳಿಸಿದೆ.
ಇದೇ ವೇಳೆ ಪೋಷಕರ ಜೊತೆ ಸಭೆ ನಡೆಸಿ ಶಾಲಾ ಕಾಲೇಜು ಆರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ. ಆನ್ ಲೈನ್ ಹಾಗೂ ದೂರ ಶಿಕ್ಷಣವು ಆದ್ಯತೆಯ ಬೋಧನಾ ವಿಧಾನವಾಗಿ ಮುಂದುವರಿಯುತ್ತದೆ ಹಾಗೂ ಪ್ರೋತ್ಸಾಹಿಸಲ್ಪಡುತ್ತದೆ ಎಂದು ಕೇಂದ್ರ ತಿಳಿಸಿದೆ.
ಇನ್ನು ಅಕ್ಟೋಬರ್ 15 ರಿಂದ ಸಿನೆಮಾ ಹಾಲ್ ಗಳು, ಮಲ್ಟಿಪ್ಲೆಕ್ಸ್ ಗಳು, ಎಕ್ಸಿಬಿಶನ್ ಹಾಲ್ ಗಳು ಶೇ.50ರಷ್ಟು ಆಸನ ಸಾಮರ್ಥ್ಯ ದೊಂದಿಗೆ ಕಾರ್ಯಾಚರಿಸಬಹುದು.ಹಾಗೂ ಮನರಂಜನಾ ಉದ್ಯಾನವನಗಳನ್ನು ಮತ್ತೆ ತೆರೆಯಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದಕ್ಕೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ತಿಳಿಸಿದೆ.
Comments are closed.