ಕರಾವಳಿ

ಲ್ಯಾಂಪ್ ಬೆಳಕಿನಲ್ಲಿ ಕೋಳಿ ಅಂಕ- ಹೆಬ್ರಿ ಪೊಲೀಸರಿಂದ ಆರೋಪಿಗಳ ಬಂಧನ..!

Pinterest LinkedIn Tumblr

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ 11 ಮಂದಿ ಆರೋಪಿಗಳನ್ನು ಹೆಬ್ರಿ ಪೊಲೀಸರು ಬಂಧಿಸಿದ ಘಟನೆ ವರಂಗ ಗ್ರಾಮದ ತಲೆಮನೆ ಎಂಬಲ್ಲಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಉದಯ, ಸುದರ್ಶನ್ @ ಬಾಬು, ಸುಧೀರ್, ಭಾಸ್ಕರ, ಸುನೀಲ್, ಸಂತೋಷ್, ಚರಣ್ ಕುಮಾರ್, ಶ್ರೀಧರ ಶೆಟ್ಟಿ, ರಘುನಾಥ ಪೂಜಾರಿ, ರಮೇಶ್ ಶೆಟ್ಟಿ, ಮಂಜುನಾಥ, ಪ್ರಜ್ವಲ್, ಸುಧೀರ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೋಳಿ ಅಂಕಕ್ಕೆ ಬಳಸಿದ 19 ಕೋಳಿ ಹುಂಜಗಳನ್ನು ಹಾಗೂ ಕೋಳಿ ಅಂಕದ ಜುಗಾರಿಗೆ ಬಳಸಿದ 17 ಸಾವಿರ ನಗದು, ಕೋಳಿಗಳಿಗೆ ಕಟ್ಟಿದ 10 ಬಾಳುಗಳು ಹಾಗೂ ಸ್ಥಳದಲ್ಲಿದ್ದ ಒಟ್ಟು 25 ವಾಹನಗಳನ್ನು ಮತ್ತು ಎರಡು ಲ್ಯಾಂಪ್ ವಶಕ್ಕೆ ಪಡೆಯಲಾಗಿದೆ‌.

ಸೆ.29ರಂದು ರಾತ್ರಿ 7.35ರ ಸುಮಾರಿಗೆ ವರಂಗ ಗ್ರಾಮದ ತಲೆ ಮನೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಂದಷ್ಟು ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಸುತ್ತಿದ್ದ ಹೆಬ್ರಿ ಪಿಎಸ್ಐ ಸುಮ ಬಿ. ಅವರಿಗೆ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿದಾಗ ಸಾರ್ವಜನಿಕ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿ ಸುಮಾರು 20 ರಿಂದ 30 ಜನರು ಲ್ಯಾಂಪ್ ಬೆಳಕಿನ ಸಹಾಯದಿಂದ ಕೋಳಿಗಳ ಕಾಲಿಗೆ ಹರಿತವಾದ ಬಾಳುಗಳನ್ನು ಕಟ್ಟಿ ಅವುಗಳಿಗೆ ಹಿಂಸೆಯಾಗುವಂತೆ ಕಾಳಗಕ್ಕೆ ಬಿಟ್ಟು ವಿಜೇತ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದು ದಾಳಿ ನಡೆಸಿ 11 ಜನರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ದಾಳಿ ವೇಳೆ ಒಂದಷ್ಟು ಮಂದಿ ಉಳಿದವರು ಓಡಿ ಹೋಗಿದ್ದು ಈ ಕೋಳಿ ಅಂಕವನ್ನು ತಲೆಮನೆಯ ಉದಯ ಮತ್ತು ಸುದರ್ಶನ್ @ ಬಾಬು ಎಂಬವರು ನಡೆಸುತ್ತಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.