
ಮುಂಬೈ: ಸುಶಾಂತ್ ಸಿಂಗ್ ಸಾವು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ಕಂಗನಾ ರಣಾವತ್, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಗನ ವಿರುದ್ಧ ಆರೋಪ ಮಾಡಿದ್ದರು. ಕಂಗನಾ ಅವರ ಮುಂಬೈ ಕಚೇರಿಯನ್ನು ಮಹಾರಾಷ್ಟ್ರ ಸರ್ಕಾರ ಕೆಡವಿ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ.
ಈ ಮಧ್ಯೆ ನಟಿ ಕಂಗನಾ ಈಗ ಮತ್ತೊಮ್ಮೆ ಮಹಾರಾಷ್ಟ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಕಂಗನಾ ಟಾರ್ಗೆಟ್ ಮಾಡಲು ಕಾರಣ ಹರಿಯಾಣದ ಯೂಟ್ಯೂಬರ್ ಸಾಹಿಲ್ ಚೌಧರಿಯವರ ಬಂಧನ.
ಸಾಹಿಲ್ ಚೌಧರಿಯವರು ತಮ್ಮ ಯೂಟ್ಯೂಬ್ ಮೂಲಕ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದಾದ ಮೇಲೆ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಸಾಹಿಲ್ರನ್ನು ಬಂಧಿಸಿದ ಮುಂಬೈ ಪೊಲೀಸರ ಕ್ರಮವನ್ನು ಖಂಡಿಸಿ ಟ್ವೀಟ್ ಮಾಡಿದ ಕಂಗನಾ ರಣಾವತ್, ಮುಂಬೈ ಒಂದು ಗೂಂಡಾ ನಗರವಾಗಿದೆ. ಇಲ್ಲಿ ಗೂಂಡಾಗಳ ಆಡಳಿತ ನಡೆಯುತ್ತಿದೆ. ಅದರಲ್ಲೂ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯವರಂತೂ ಜಗತ್ತಿನಲ್ಲಿ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂದು ವ್ಯಂಗ್ಯವಾಡಿದ್ದಾರೆ.
ಮುಂಬೈ ಒಂದು ಗೂಂಡಾ ಸಿಟಿಯಾಗುತ್ತಿದೆ. ಇಲ್ಲಿರುವ ಜಗತ್ತಿನ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಮತ್ತು ಅವರ ತಂಡವನ್ನು ಯಾರೂ ಪ್ರಶ್ನೆ ಮಾಡುವಂತೆಯೇ ಇಲ್ಲ. ಇವರು ನಮಗೆ ಏನು ಮಾಡಬಹುದು? ನಮ್ಮ ಮನೆಗಳನ್ನು ಮುರಿದು, ನಮ್ಮನ್ನು ಕೊಲ್ಲುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಟ್ವೀಟ್ನಲ್ಲಿ ಕಾಂಗ್ರೆಸ್ ಅಕೌಂಟ್ನ್ನು ಟ್ಯಾಗ್ ಮಾಡಿ, ನಮ್ಮ ಪ್ರಶ್ನೆಗೆ ಯಾರು ಉತ್ತರಿಸುತ್ತಾರೆ ಎಂದೂ ಕೇಳಿದ್ದಾರೆ. ನಾನು ಸಾಹಿಲ್ ಚೌಧರಿ ಪರ ನಿಲ್ಲುತ್ತೇನೆ(#istandwithsaahilchoudhary) ಎಂದೂ ಹೇಳಿದ್ದಾರೆ.
ಸಾಹಿಲ್ ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದ್ದೇ ತಪ್ಪಾಯ್ತು. ಸರ್ಕಾರದ ಕ್ರಮ, ಕಾರ್ಯವೈಖರಿಯನ್ನು ಪ್ರಶ್ನಿಸುವ ಹಕ್ಕನ್ನು ನಮಗೆ ಪ್ರಜಾಪ್ರಭುತ್ವ ಕೊಟ್ಟಿದೆ. ಅದನ್ನೇ ಮಾಡಿದ ಸಾಹಹಿಲ್ಗೆ ಈಗ ಜೈಲು ಶಿಕ್ಷೆ ಸಿಕ್ಕಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
Comments are closed.