
ಮಂಗಳೂರು ಸೆಪ್ಟೆಂಬರ್ 28 : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಹಿಂದಿ ವಿಭಾಗಗಳ ವತಿಯಿಂದ ಸೆಪ್ಟೆಂಬರ್ 21 ರಿಂದ ಸೆಪ್ಟೆಂಬರ್ 26 ರವರೆಗೆ ಹಿಂದಿ ಸಪ್ತಾಹವನ್ನು ಆಚರಿಸಿದ ಅಂಗವಾಗಿ ವಿಶೇಷ ವಿಚಾರ ಸಂಕಿರಣಗಳ ಜೊತೆಗೆ ಹಲವು ಬಗೆಯ ಆನ್ಲೈನ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸೆಪ್ಟೆಂಬರ್ 23 ರಂದು ಮುಂಬಯಿಯ ಆರ್ಬಿಐ ಪ್ರಬಂಧಕ ಡಾ. ಮಧುಶೀಲ ಆಯಿಲಿಯಾಥ್ ಸಾಹಿತ್ಯ ಕ್ಷೇತ್ರದಲ್ಲಿ ಹಿಂದಿ ಎಂಬ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮರುದಿನ ಮುಂಬಯಿಯ ನಾನಾವತಿ ಮಹಿಳಾ ಮಹಾ ವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ. ರವೀಂದ್ರ ಕಾತ್ಯಾಯನ್ ಅವರಿಂದ ವಿಶೇಷ ಉಪನ್ಯಾಸ ನಡೆಯಿತು.
ಶನಿವಾರ ಕಾಲೇಜಿನ ಶಿವರಾಮ ಕಾರಂತ ಸಭಾಭವನದಿಂದ ಆನ್ಲೈನ್ ವೇದಿಕೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಉದಯಕುಮಾರ್ ವಹಿಸಿದ್ದರು.
ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ಆನ್ಲೈನ್ ಪ್ರಬಂಧ ಲೇಖನ ಸ್ಪರ್ಧೆ, ಹಿಂದಿ ಕಾವ್ಯ ರಚನಾ ಸ್ಪರ್ಧೆಗಳು ನಡೆದವು. ಕಾಲೇಜಿನ ಪ್ರಾಧ್ಯಾಪಕರಿಗಾಗಿ ಶುದ್ಧ ಲೇಖನ ಸ್ಪರ್ಧೆ ನಡೆಯಿತು. 15 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕಾಲೇಜಿನ ಹಿಂದಿ ಸಂಘದ ಉಪನಿರ್ದೇಶಕಿ ಡಾ. ನಾಗರತ್ನ ರಾವ್, ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ. ಸುಮಾಟಿ ಆರ್ ಮೊದಲಾದವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
Comments are closed.