ರಾಷ್ಟ್ರೀಯ

ಟಾಯ್ಲೆಟ್ ನಲ್ಲಿ ಸಿಸಿಟಿವಿ ಇರಿಸಿ ಸಂಬಳ ಕೊಡದೆ ಶಿಕ್ಷಕಿಯರಿಗೆ ಬ್ಲ್ಯಾಕ್​ಮೇಲ್!

Pinterest LinkedIn Tumblr


ಮೀರತ್: ಟಾಯ್ಲೆಟ್ ನಲ್ಲಿ ಸಿಸಿಟಿವಿ ಇರಿಸಿ, ಇದರಲ್ಲಿ ಚಿತ್ರೀಕರಿಸಿದ ವಿಡಿಯೋಗಳನ್ನು ಶಾಲೆಯ ಆಡಳಿತ ಮಂಡಳಿಯು ಶಿಕ್ಷಕಿಯರಿಗೆ ತೋರಿಸಿ, ಸಂಬಳ ಕೊಡದೆ ಬ್ಲ್ಯಾಕ್​ಮೇಲ್​ ಮಾಡಿದ ಘಟನೆಯೊಂದು ಇಲ್ಲಿಂದ ವರದಿಯಾಗಿದೆ.

ಈ ಸಂಬಂಧ 52 ಮಂದಿ ಶಿಕ್ಷಕಿಯರು ದೂರು ದಾಖಲು ಮಾಡಿದ್ದು, ಸಹಾಯಕ್ಕೆ ಕೋರಿದ್ದಾರೆ. ಈ ಶಿಕ್ಷಕಿಯರು ಸಂಬಳ ಕೇಳಲು ಹೋದಾಗಲೆಲ್ಲಾ ವಿಡಿಯೋ, ಫೋಟೋ ತೋರಿಸಿ ಬ್ಲ್ಯಾಕ್​ಮೇಲ್​ ಮಾಡಲಾಗುತ್ತಿದ್ದು, ಅನೇಕ ತಿಂಗಳು ಸಂಬಳ ಇಲ್ಲದೇ ದುಡಿದಿರುವುದಾಗಿ ಇವರು ಆರೋಪಿಸಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯದರ್ಶಿ ಮತ್ತು ಅವರ ಮಗನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ), 354 (ಎ) (ಲೈಂಗಿಕ ಕಿರುಕುಳ) ಮತ್ತು 354 (ಸಿ) (ವಾಯ್ಯುರಿಸಮ್) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಆದರೆ ಶಾಲಾ ಕಾರ್ಯದರ್ಶಿ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಪುರುಷ ಶೌಚಗೃಹದಲ್ಲಿ ಅಳವಡಿಸಿರುವುದು ನಿಜ. ಮಹಿಳೆಯರ ಶೌಚಗೃಹದಲ್ಲಿ ಯಾವುದೇ ಸಿಸಿಟಿವಿ ಇಲ್ಲ. ಇತ್ತೀಚಿನ ದಿನಗಳಲ್ಲಿ ಶೌಚಗೃಹದಲ್ಲಿಯೇ ಹತ್ಯೆಗಳು ಅಧಿಕವಾಗುತ್ತಿರುವ ಕಾರಣ ಪುರುಷರ ಶೌಚಗೃಹದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕರೊನಾದಿಂದಾಗಿ ಶಿಕ್ಷಕರಿಗೆ ಸಂಬಳ ನೀಡಲು ಕಷ್ಟವಾಗುತ್ತಿದೆ. ಬ್ಲ್ಯಾಕ್​ಮೇಲ್​ ಮಾಡಲಾಗುತ್ತಿದೆ ಎನ್ನುವುದು ಸುಳ್ಳು ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.

Comments are closed.