
ತಿರುವನಂತಪುರಂ: ಕೇರಳದ ಕೊಚ್ಚಿಯಲ್ಲಿ ವಾಸವಾಗಿದ್ದ 24 ವರ್ಷದ ಅನಂತು ವಿಜಯನ್ ಎಂಬಾತ ಲಾಟರಿ ಟಿಕೆಟ್ ಖರೀದಿಸಿದ್ದ. ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಆತ ತನ್ನ ಗೆಳೆಯರ ಬಳಿ ತಾನು ಕೋಟ್ಯಾಧಿಪತಿಯಾಗುತ್ತೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದ. ಆದರೆ, ಆತನ ಸ್ನೇಹಿತರು ಆತನನ್ನು ಗೇಲಿ ಮಾಡುತ್ತಿದ್ದರು.
ಭಾನುವಾರ ಬೆಳಗ್ಗೆ ತನ್ನ ಲಾಟರಿ ಸಂಖ್ಯೆಗೆ ಬಹುಮಾನ ಬಂದಿದೆಯೇ ಎಂದು ಪೇಪರ್ ಹಿಡಿದು ಕುಳಿತ ಅನಂತು ಎರಡೆರಡು ಬಾರಿ ಕಣ್ಣುಜ್ಜಿಕೊಂಡು ನೋಡಿದ. ಆತನ ಕೈಯಲ್ಲಿದ್ದ ಟಿಕೆಟ್ಗೆ 12 ಕೋಟಿ ರೂ.ಗಳ ಲಾಟರಿ ಹೊಡೆದಿತ್ತು.
ಅಪ್ಪ-ಅಮ್ಮ, ಅಕ್ಕನಿರುವ ಕುಟುಂಬ ಅನಂತು ವಿಜಯ್ ಒಬ್ಬನ ದುಡಿಮೆಯಿಂದಲೇ ಇಡೀ ಸಂಸಾರ ಜೀವನ ಸಾಗಿಸಬೇಕಾದಂತಹ ಪರಿಸ್ಥಿತಿಯಿದೆ. ಲಾಕ್ಡೌನ್ ಬಳಿಕ ಅನಂತನಿಗೆ ಸರಿಯಾದ ಸಂಬಳವೂ ಸಿಗುತ್ತಿರಲಿಲ್ಲ. ತನ್ನ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ನಿರ್ಧರಿಸಿದ್ದ ಅನಂತು BR 75 TB 173964 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದ.
ಮನೆಗೆ ಹಣವನ್ನು ಹೊಂದಿಸಲು ಪರದಾಡುತ್ತಿದ್ದ ಅನಂತು ಇದೇ ಮೊದಲ ಬಾರಿಗೆ ಲಾಟರಿ ಖರೀದಿಸಿದ್ದ. ಆದರೆ, ಆತನ ಅದೃಷ್ಟ ಖುಲಾಯಿಸಿತ್ತು. ಪಾರ್ಟ್ ಟೈಂ ಕೆಲಸ ಮಾಡುತ್ತಾ ತನ್ನ ಓದಿಗೆ ತಾನೇ ಹಣ ಹೊಂದಿಸಿಕೊಂಡಿದ್ದ ಅನಂತು ಕಳೆದ 2 ವರ್ಷಗಳಿಂದ ಎರ್ನಾಕುಲಂನ ಪೊನ್ನೆತ್ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ.
Comments are closed.