ಕ್ರೀಡೆ

ಕರೊನಾ ಹಾವಳಿ ಮುಂದುವರಿದರೆ ಯುಎಇ ನಲ್ಲಿ ಮುಂದಿನ ಐಪಿಎಲ್?

Pinterest LinkedIn Tumblr


ದುಬೈ: ಬರುವ ದಿನಗಳಲ್ಲಿ ಭಾರತದಲ್ಲಿ ಕರೊನಾ ಸೋಂಕು ಮುಂದುವರಿದರೆ, ಮುಂದಿನ ವರ್ಷದ ಐಪಿಎಲ್ 14ನೇ ಆವೃತ್ತಿಯ ಟೂರ್ನಿ ಯುಎಇನಲ್ಲೇ ನಡೆಸುವ ಸಾಧ್ಯತೆ ಇದೆ. ಈ ಕುರಿತು ಬಿಸಿಸಿಐ ವತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ನಡುವೆ ಶನಿವಾರ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದೆ.

ಒಪ್ಪಂದದ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಖಜಾಂಚಿ ಅರುಣ್ ಧುಮಾಲ್ ಕೂಡ ಹಾಜರಿದ್ದರು.ಇಸಿಬಿ ಜತೆಗೆ ಎಂಒಯುಗೆ ಸಹಿ ಹಾಕಿರುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಶನಿವಾರ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಮುನ್ನ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ.

2021ರ ಐಪಿಎಲ್ ಟೂರ್ನಿಯನ್ನೂ ಯುಎಇಯಲ್ಲೇ ನಡೆಸುವ ಬಗೆಗಿನ ಒಪ್ಪಂದದ ಬಗ್ಗೆ ಅಧಿಕೃತವಾಗಿ ಬಿಸಿಸಿಐನಿಂದ ಯಾವುದೇ ನೀಡಲಾಗಿಲ್ಲ. ಆದರೆ ಮುಂದಿನ ಐಪಿಎಲ್‌ಗೆ ಇನ್ನು 6 ತಿಂಗಳು ಮಾತ್ರ ಸಮಯಾವಕಾಶವಿದ್ದು, ಆಗಲೂ ಭಾರತದಲ್ಲಿ ಕರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದಿದ್ದರೆ ಮತ್ತೆ ಯುಎಇಯಲ್ಲೇ ಟೂರ್ನಿ ನಡೆಸುವ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ. ಮುಂದಿನ ಐಪಿಎಲ್ 2021ರ ಮಾರ್ಚ್ ಅಂತ್ಯದಿಂದ ಮೇವರೆಗೆ ನಡೆಯುವ ನಿರೀಕ್ಷೆ ಇದೆ.

ಇನ್ನು ಮುಂದಿನ ಐಪಿಎಲ್ ಟೂರ್ನಿಗೆ ಮುನ್ನ ಭಾರತ ತಂಡ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳನ್ನು ಒಳಗೊಂಡ ಟೂರ್ನಿ ಆಡಬೇಕಿದೆ. ಡಿಸೆಂಬರ್-ಜನವರಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿ ತವರಿಗೆ ಮರಳಿದ ಬಳಿಕ ಭಾರತ ತಂಡ ಈ ಸರಣಿ ಆಡಬೇಕಾಗಿದೆ.

Comments are closed.