ಕ್ರೀಡೆ

ಸ್ಟಾರ್‌ ನ್ಪೋರ್ಟ್ಸ್ ಆ್ಯಂಕರ್ “ಮಾಯಂತಿ” ಐಪಿಎಲ್‌ಗೆ ಇಲ್ಲ

Pinterest LinkedIn Tumblr


ಬೆಂಗಳೂರು: ಐಪಿಎಲ್‌ನ ಅಧಿಕೃತ ಪ್ರಸಾರ ಕಂಪೆನಿಯಾದ ಸ್ಟಾರ್‌ ನ್ಪೋರ್ಟ್ಸ್ ತನ್ನ ಆ್ಯಂಕರ್ ಮತ್ತು ಕಮೆಂಟೇಟರ್‌ಗಳ ಯಾದಿಯನ್ನು ಪ್ರಕಟಿಸಿದಾಗ ಅಲ್ಲಿ ಅಚ್ಚರಿಯೊಂದು ಕಂಡುಬಂದಿತ್ತು. ಜನಪ್ರಿಯ ಆ್ಯಂಕರ್‌, ನ್ಪೋರ್ಟ್ಸ್ ಪ್ರಸಂಟೇಟರ್‌ ಮಾಯಂತಿ ಲ್ಯಾಂಜರ್‌ ಅವರ ಹೆಸರು ಮಾಯವಾಗಿತ್ತು. ಏಕಿರಬಹುದು ಎಂಬ ಪ್ರಶ್ನೆ ಅನೇಕರನ್ನು ಕಾಡಿತ್ತು.

ಇದಕ್ಕೆ ಈಗ ಉತ್ತರ ಸಿಕ್ಕಿದೆ. ಕರ್ನಾಟಕದ ಕ್ರಿಕೆಟಿಗ ಸ್ಟುವರ್ಟ್‌ ಬಿನ್ನಿ ಅವರ ಪತ್ನಿಯಾಗಿರುವ ಮಾಯಂತಿ ಈಗ ಅಮ್ಮನಾಗಿದ್ದಾರೆ. ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದರ ಚಿತ್ರವೊಂದನ್ನು ಬಿನ್ನಿ ದಂಪತಿ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಜತೆಗೆ, ಅಗತ್ಯ ಸಮಯದಲ್ಲಿ ಬೆಂಬಲಕ್ಕೆ ನಿಂತ ಸ್ಟಾರ್‌ ನ್ಪೋರ್ಟ್ಸ್ ಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.

Comments are closed.