ಮನೋರಂಜನೆ

ನಟಿಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ನಿರ್ಮಾಪಕನ ಬಂಧನ

Pinterest LinkedIn Tumblr
  • Gym
    ಹೈದರಾಬಾದ್​: ತೆಲುಗಿನ ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆ ಪ್ರಕರಣದ ಸಂಬಂಧ ತೆಲಗು ಚಿತ್ರರಂಗದ ಪ್ರಖ್ಯಾತ ನಿರ್ಮಾಪಕ ಜಿ. ಅಶೋಕ್​ ರೆಡ್ಡಿ ಅವರನ್ನು ಹೈದರಾಬಾದ್​ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್​ನ ಎಸ್​.ಆರ್​. ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಮಧುರನಗರ ಏರಿಯಾದಲ್ಲಿರುವ ಮನೆಯಲ್ಲಿ ಕಳೆದ ಭಾನುವಾರ ಆತ್ಮಹತ್ಯೆ ಸ್ಥಿತಿಯಲ್ಲಿ ಶ್ರಾವಣಿ ಶವ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಟಿಕ್​ಟಾಕ್​ನಲ್ಲಿ ಪರಿಚಯವಾದ ದೇವರಾಜ್​ ಎಂಬ ಯುವಕನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪಾಲಕರು ಆರೋಪಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಶ್ರಾವಣಿ ನಿರ್ಮಾಪಕ ಅಶೋಕ್​ ರೆಡ್ಡಿ ಜತೆಯಲ್ಲಿ ಮಾತನಾಡಿದ್ದ ಆಡಿಯೋವೊಂದು ವೈರಲ್​ ಆಗಿತ್ತು.

ಇದಾದ ಬೆನ್ನಲ್ಲೇ ಅಶೋಕ್​ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಾಗಿತ್ತು. ಕಳೆದ ಸೋಮವಾರದಿಂದ ಅಶೋಕ್​ ರೆಡ್ಡಿ ನಾಪತ್ತೆಯಾಗಿದ್ದ. ಇದೀಗ ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮುನ್ನ ವಿಚಾರಣೆಗೆ ಹಾಜರಾಗುವಂತೆ ಅಶೋಕ್​ ರೆಡ್ಡಿಗೆ ಪೊಲೀಸರು ನೋಟಿಸ್​ ನೀಡಿದ್ದರು. ಆದರೆ, ಮೊಬೈಲ್​ ಸ್ವಿಚ್​ ಆಫ್​ ಮಾಡಿ ಮೊಬೈಲ್​ ಬಚ್ಚಿಟ್ಟು ಅಶೋಕ್​ ರೆಡ್ಡಿ ನಾಪತ್ತೆಯಾಗಿದ್ದರು.

ಅಶೋಕ್​, ಶ್ರಾವಣಿ ಪ್ರಕರಣದಲ್ಲಿ ಬಂಧಿಯಾಗಿರುವ 3ನೇ ಆರೋಪಿಯಾಗಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಈಗಾಗಲೇ ಸಾಯಿ ಕೃಷ್ಣರೆಡ್ಡಿ ಮತ್ತು ದೇವರಾಜ್​ ರೆಡ್ಡಿ ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಪ್ರಕರಣ ಸಂಬಂಧ ಮಾತನಾಡಿರುವ ಪಶ್ಚಿಮ ವಲಯ ಡೆಪ್ಯುಟಿ ಕಮಿಷನರ್​ ಆಫ್​ ಪೊಲೀಸ್​ ಎ. ಆರ್​. ಶ್ರೀನಿವಾಸ್​, 2017ರಿಂದ ಅಶೋಕ್​ ಮತ್ತು ಶ್ರಾವಣಿ ನಡುವೆ ಪರಿಚಯ ಆರಂಭವಾಯಿತು. ಪ್ರೇಮತೋ ಕಾರ್ತಿಕ್​ ಚಿತ್ರದಲ್ಲಿ ಚಿಕ್ಕ ಪಾತ್ರವೊಂದನ್ನು ಶ್ರಾವಣಿಗೆ ಅಶೋಕ್​ ಆಫರ್​ ಮಾಡಿದ್ದರು. ಹೀಗೆ ದಿನ ಕಳೆದಂತೆ ಅಶೋಕ್​ ಮತ್ತು ಶ್ರೀಕೃಷ್ಣ ರೆಡ್ಡಿ ಇಬ್ಬರು ಶ್ರಾವಣಿಯೊಂದಿಗೆ ಸಂಬಂಧ ಹೊಂದಿದ್ದರು ಎಂದಿದ್ದಾರೆ.

ಇದರ ನಡುವೆ ಕಳೆದ ಆಗಸ್ಟ್​ನಿಂದ ದೇವರಾಜ್​ ರೆಡ್ಡಿ ಎಂಬಾತನೊಂದಿಗೆ ಶ್ರಾವಣಿ ಸಲುಗೆ ಬೆಳೆಸಿಕೊಂಡಿದ್ದನ್ನು ಅಶೋಕ್​ ಮತ್ತು ಸಾಯಿ ಕೃಷ್ಣರಿಗೆ ಸಹಿಸಲು ಆಗಿಲ್ಲ. ಅಂದಿನಿಂದ ಇಬ್ಬರು ಶ್ರಾವಣಿ ಮತ್ತು ಆಕೆಯ ಕುಟುಂಬಕ್ಕೆ ಕಿರುಕುಳ ನೀಡಲು ಆರಂಭಿಸಿದ್ದರು. ಅಲ್ಲದೆ, ದೇವರಾಜ್​ನಿಂದ ದೂರವಿರುವಂತೆ ಶ್ರಾವಣಿ ಮೇಲೆ ಹಲ್ಲೆಯನ್ನು ಮಾಡಿದ್ದಾರೆಂದು ಶ್ರೀನಿವಾಸ್ ಹೇಳಿದರು.

ಇದರ ನಡುವೆ ಆರೋಪಿ ದೇವರಾಜ್​ನನ್ನು ಬಂಧಿಸಿ ಪೊಲೀಸ್​ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ಪ್ರಕರಣ ಹೊಸ ತಿರುವು ಪಡೆದುಕೊಂಡಿತು. ಆರಂಭದಲ್ಲಿ ದೇವರಾಜ್​ ಪ್ರಕರಣದ ಮೂರನೇ ಆರೋಪಿಯಾಗಿದ್ದ. ಆದರೆ, ಇದೀಗ ಪ್ರಕರಣ ಪ್ರಮುಖ ಆರೋಪಿ ದೇವರಾಜ್​ ಆಗಿದ್ದಾನೆ. ಶ್ರಾವಣಿ ಮತ್ತು ದೇವರಾಜ್​ ನಡುವೆ ನಡೆದಿದ್ದ ಫೋನ್​ ಸಂಭಾಷಣೆಯಲ್ಲಿ ಅಶೋಕ್​ ರೆಡ್ಡಿ ಹಾಗೂ ಸಾಯಿ ಕೃಷ್ಣ ಜತೆಗಿನ ಸಂಬಂಧ ಮತ್ತು ಅವರು ಕುಟುಂಬ ಮತ್ತು ತನಗೆ ನೀಡುತ್ತಿರುವ ಕಿರುಕುಳದ ಬಗ್ಗೆ ತಿಳಿಸಿದ್ದಳು.

ಇತ್ತ ಶ್ರಾವಣಿಯ ಈ ಹಿಂದಿನ ಸಂಬಂಧದ ಬಗ್ಗೆ ತಿಳಿದುಕೊಂಡ ದೇವರಾಜ್​ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದನ್ನು ಮುರಿದು, ಆಕೆಯಿಂದ ದೂರವಿರಲು ಪ್ರಯತ್ನಿಸಿದ್ದಾನೆ. ಅಲ್ಲದೆ, ಹಿಂದಿನ ಸಂಬಂಧಗಳನ್ನು ಕೆದಕಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಈ ಎಲ್ಲ ವಿಚಾರಗಳಿಂದ ಮನನೊಂದಿದ್ದ ಶ್ರಾವಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಹೇಳಲಾಗಿದೆ.

Comments are closed.