ಮನೋರಂಜನೆ

ಬಾಲಿವುಡ್ ನಟಿ ಕಂಗನಾ ರಣಾವತ್​ ಮನೆ ಕೆಡವಲು ಮುಂಬೈ ಪಾಲಿಕೆ ನಿರ್ಧಾರ!

Pinterest LinkedIn Tumblr


ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಮನೆಯನ್ನು ತೆರವುಗೊಳಿಸಲು ಮುಂಬೈ ಮಹಾನಗರ ಪಾಲಿಕೆ ನೋಟಿಸ್ ಜಾರಿ ಮಾಡಿದೆ!

ಇತ್ತೀಚೆಗಷ್ಟೇ ಬಾಂದ್ರಾದ ಪಾಲಿ ಹಿಲ್​ನಲ್ಲಿರುವ ಕಂಗನಾ​ ಅವರ ಕಚೇರಿಯ ಕೆಲ ಭಾಗ ಅತಿಕ್ರಮಣವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಮುಂಬೈ ಮಹಾನಗರ ಪಾಲಿಕೆ ಒಡೆದು ಹಾಕಿತ್ತು

ಹೌದು, ಇದೀಗ ಮುಂಬೈನ ಖರ್​ ಪ್ರದೇಶದಲ್ಲಿರುವ ಕಂಗನಾ ಮನೆಗೂ ಬಿಎಂಸಿ ನೋಟಿಸ್​ ರವಾನಿಸಿದ್ದು, ಅತಿಕ್ರಮಣವಾದ ಮನೆಯನ್ನು ತೆರೆವುಗೊಳಿಸಿ ಎಂದಿದೆ. ಖರ್ ಪ್ರದೇಶದ ಬಹು ಮಹಡಿಯ ಅಪಾರ್ಟ್ಮೆಂಟ್​ನಲ್ಲಿ ಮೂರು ಫ್ಲಾಟ್​​ಗಳು ಕಂಗನಾ ಅವರದ್ದಾಗಿವೆ.

ಮೊದಲ ಫ್ಲಾಟ್​ 797 ಚದರ ಅಡಿ ವಿಸ್ತಿರ್ಣ, ಎರಡನೆಯದ್ದು 711 ಚದರ ಅಡಿ ಮತ್ತು ಮೂರನೇಯ ಫ್ಲಾಟ್ 459 ಚದರ ಅಡಿ ವಿಸ್ತೀರ್ಣ ಹೊಂದಿದೆ. 2019ರ ಮಾರ್ಚ್ 8ರಂದು ಕಂಗನಾ ಹೆಸರಿನಲ್ಲಿ ಈ ಮೂರು ಕಟ್ಟಡಗಳು ನೋಂದಣಿಯಾಗಿವೆ. ಕಟ್ಟಡದ ಪ್ಲಾನ್​ನಲ್ಲಿ ಇಲ್ಲದ ಒಂದಷ್ಟು ಭಾಗಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗಿದ್ದು, ಶೀಘ್ರದಲ್ಲಿ ಅವೆಲ್ಲವನ್ನು ತೆರವುಗೊಳಿಸುವಂತೆ ನೋಟಿಸ್​ನಲ್ಲಿ ಆದೇಶಿಸಿದೆ.

Comments are closed.