ಮನೋರಂಜನೆ

ತಾನು ಕೂಡ ಮಾದಕ ವ್ಯಸನಿಯಾಗಿದ್ದೆ ಎಂಬ ನಟಿ ಕಂಗನಾ ರಾನಾವತ್ ವೀಡಿಯೊ ಭಾರೀ ವೈರಲ್

Pinterest LinkedIn Tumblr

ಮುಂಬೈ: ಬಾಲಿವುಡ್’ನಲ್ಲಿ ಈಗ ಭಾರೀ ಸುದ್ದಿಯಲ್ಲಿರುವ ನಟಿ ಕಂಗನಾ ರಾನಾವತ್ ಅವರು ಈ ಹಿಂದೆ ನೀಡಿದ್ದ ಹೇಳಿಕೆಯ ವೀಡಿಯೊ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ತಿಕ್ಕಾಟದ ಮಧ್ಯೆ ತಾನೊಬ್ಬಳು ಡ್ರಗ್ಸ್ ದಾಸಳಾಗಿದ್ದೆ ಎಂಬ ಈ ಹಿಂದಿನ ವೀಡಿಯೊ ಈಗ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಈ ವಿಡಿಯೊವನ್ನು ಕಂಗನಾ ಅವರೇ ಕಳೆದ ಮಾರ್ಚ್ ನಲ್ಲಿ ಲಾಕ್ ಡೌನ್ ಸಮಯದಲ್ಲಿ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಹಾಕಿಕೊಂಡಿದ್ದರು.

ವಿಡಿಯೊದಲ್ಲಿ ಕಂಗನಾ, ಹಿಮಾಚಲ ಪ್ರದೇಶದ ಮನಾಲಿಯ ನನ್ನ ಮನೆಯಿಂದ ಹೊರಬಂದು ಮುಂಬೈಗೆ ಚಿತ್ರರಂಗದಲ್ಲಿ ಅವಕಾಶ ಅರಸಿ ಬಂದು ಒಂದೆರಡು ವರ್ಷಗಳಲ್ಲಿ ನಾನು ನಟಿಯಾದೆ. ಅದರ ಒಟ್ಟೊಟ್ಟಿಗೆ ಮಾದಕ ವಸ್ತು ಸೇವನೆಯ ಚಟಕ್ಕೂ ಬಿದ್ದೆ. ಅನೇಕ ಘಟನೆಗಳು ನನ್ನ ಜೀವನದಲ್ಲಿ ನಡೆದುಹೋದವು. ನನ್ನ ಜೀವನದಲ್ಲಿ ಹಲವು ಅಪಾಯಕಾರಿ ಘಟನೆಗಳು ನಡೆಯುವಂತಹ ಜನರ ಕೈಯಲ್ಲಿ ನಾನು ಸಿಕ್ಕಿಹಾಕಿಕೊಂಡಿದ್ದೆ ಎಂದು ಹೇಳುತ್ತಾರೆ, ಇದನ್ನು ಕಂಗನಾ ತಮ್ಮ ಮನಾಲಿಯ ಮನೆಯ ಟೆರೇಸ್ ಮೇಲೆ ಹೇಳುತ್ತಿರುವ ವಿಡಿಯೊವಾಗಿದ್ದು ನಂತರ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು.

ಸುಶಾಂತ್ ಸಿಂಗ್ ರಜಪೂತ್ ನಿಧನ ನಂತರ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯನ್ನು ಡ್ರಗ್ ಪ್ರಕರಣದಲ್ಲಿ ಬಂಧಿಸಿದ ನಂತರ ಕಂಗನಾ ಬಾಲಿವುಡ್ ನಲ್ಲಿ ಶೇಕಡಾ 99ರಷ್ಟು ಮಂದಿ ಕೊಕೇನ್ ಸೇವಿಸುತ್ತಾರೆ, ರಣವೀರ್ ಸಿಂಗ್, ರಣಬೀರ್ ಕಪೂರ್, ವಿಕಿ ಕೌಶಲ್ , ಆಯನ್ ಮುಖರ್ಜಿ ಮೊದಲಾದವರ ರಕ್ತ ಪರೀಕ್ಷೆ ಮಾಡಿಸಿ ಎಂದಿದ್ದರು.

ಇದೀಗ ಅವರ ಮಾತುಗಳನ್ನು ಹೊಂದಿರುವ ವಿಡಿಯೊಗಳನ್ನು ಒಬ್ಬರು ಶೇರ್ ಮಾಡಿ, ಕಂಗನಾ ಅವರೇ ಡ್ರಗ್ ಸೇವಿಸುತ್ತಿದ್ದರು, ಈಗ ಏನನ್ನುತ್ತೀರಿ ಎಂದು ಕೇಳಿದ್ದಾರೆ.

ಇನ್ನು ತಮ್ಮ ಮೇಲೆ ಕೇಳಿಬಂದಿದ್ದ ಡ್ರಗ್ ಆರೋಪಕ್ಕೆ ನಟಿ ಕಂಗನಾ, ನನ್ನ ವಿರುದ್ಧದ ಆರೋಪ ಸಾಬೀತಾದರೆ ಮುಂಬೈ ನಗರವನ್ನು ಶಾಶ್ವತವಾಗಿ ತೊರೆಯುವುದಾಗಿ ಹೇಳಿದ್ದರು.

Comments are closed.