ಕುಂದಾಪುರ: ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಲ್ಲೂರು ಗ್ರಾಮ ಕೋಟೆಬಾಗಿಲು ಸಂಪರ್ಕ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ದೂರು ನೀಡಿದ್ದಾರೆ.

ಕೋಟೆಬಾಗಿಲು ಸಂಪರ್ಕ ರಸ್ತೆ ಪರಿಶಿಷ್ಟ ಜಾತಿ ಹಾಗೂ ಪಂಗಡ ಯೋಜನೆಯಲ್ಲಿ ವಾರಾಹಿ ನೀರಾವರಿ ಇಲಾಖೆ 25 ಲಕ್ಷ ಅನುದಾನ ಮಂಜೂರು ಮಾಡಿದ್ದು, ಕೆಆರ್‌ಎಲ್‌ಡಿ ಕಾಮಗಾರಿ ಗುತ್ತಿಗೆ ಪಡೆದಿದ್ದರೂ ಕಾಮಗಾರಿ ನಿರ್ವಹಿಸದೆ ಖಾಸಗಿ ವ್ಯಕ್ತಿಗೆ ಕಾಮಗಾರಿ ಅವಕಾಶ ಮಾಡಿಕೊಟ್ಟಿದೆ. ಕೋಟೆಬಾಗಿಲಲ್ಲ 208 ಪರಿಶಿಷ್ಟ ಜಾತಿ ಹಾಗೂ ಪಂಗಡ ಮನೆಯಿದೆ. ಕೋಟೆಬಾಗಲು ಪ್ರಮುಖ ಸಂಪರ್ಕಕೊಂಡಿ ಕೂಡಾ ಆಗಿದೆ.
ರಸ್ತೆ 4.005 ರಿಂದ ಮೀಟರ್ ಅಗಲ ಮಾಡಬೇಕಿದ್ದರೂ 3.66 ಮೀ ಅಗಲಮಾಡಿದ್ದು, ರಸ್ತೆಯಲ್ಲಿ ಸಮತಟ್ಟು ಮಾಡಿ ಜೆಲ್ಲಿ ಕೂರಿಸಿ, ರೋಲ್ ಮಾಡದೆ, ಅಡ್ಡಾದಿಡ್ಡಿ ಮಿಕ್ಸ್ ರಸ್ತೆಯಲ್ಲಿ ಸುರಿದು ಕಾಮಗಾರಿ ನಡೆಸಲಾಗುತ್ತಿದೆ. ಮೋರಿಗಳಿಗೆ ಕಳಪೆ, ಕಬ್ಬಿಣದ ಸರಳು ಹೊರಗೆ ಇಣುಕುವ ಪೈಪ್‌ಗಳ ಅಳವಡಸಲಾಗಿದೆ. ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೆಆರ್‌ಎಲ್‌ಡಿ ಇಂಜಿನಿಯರ್ ಗ್ರಾಪಂ ಜೊತೆ ಜಂಟಿ ಸರ್ವೇಮಾಡಿ, ಅಂದಾಜು ನಕ್ಷೆ ಸಿದ್ದಪಡಿಸದೆ ಕೆಲಸ ಮಾಡಲು ಅನುಕೂಲ ಮಾಡಿಕೊಡಲಾಗಿದೆ.
ಕೆಆರ್‌ಡಿಎಲ್ ಇಂಜಿನಿಯರ್ ಮತ್ತು ಗ್ರಾಪಂ ಜಂಟಿ ಸರ್ವೆ ನಡೆಸಿ, ನಿಯಮದ ಪ್ರಕಾರ ರಸ್ತೆ ಮಾಡುವ ಜೊತೆ ಚರಂಡಿ ನಿರ್ಮಿಸಬೇಕು. ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.
Comments are closed.