ರಾಷ್ಟ್ರೀಯ

ಯುವತಿಗೆ ಲೈಂಗಿಕ ಕಿರುಕುಳ ನೀಡಿ ವೇಗವಾಗಿ ಚಲಿಸುವ ಕಾರಿನಿಂದ ತಳ್ಳಿದ ಸ್ನೇಹಿತ

Pinterest LinkedIn Tumblr

ಕೋಲ್ಕತ್ತಾ: 31 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ವೇಗವಾಗಿ ಚಲಿಸುವ ಕಾರಿನಿಂದ ತಳ್ಳಿರುವ ಅಮಾನವೀಯ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಇಷ್ಟು ಮಾತ್ರವಲ್ಲದೆ ಯುವತಿಯನ್ನು ಕಾರಿನಿಂದ ತಳ್ಳಲಾಗಿದ್ದ ಕಾರು ಇನ್ನೊಬ್ಬ ದಂಪತಿಗಳ ಮೇಲೆ ಹರಿದು ಹೋಗಿದ್ದು ಪತಿಯ ಕಿರುಚಾಟ ಕೇಳಿ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.

ಕೋಲ್ಕತ್ತಾದ ಪೂರ್ವ ಭಾಗದ ಆನಂದಪುರ ಪ್ರದೇಶದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಸೆಡಾನ್ ಕಾರಿನಲ್ಲಿ ವೇಗವಾಗಿ ಬರುತ್ತಿದ್ದಾಗ ತನಗೆ ಕಿರುಕುಳ ನೀಡಿದ ಸ್ನೇಹಿತನೊಡನೆ ಯುವತಿ ಪ್ರಯಣಿಸುತ್ತಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವಳು ಮನೆಗೆ ಹೋಗಬೇಕೆಂದು ಒತ್ತಾಯಪಡಿಸಿದ ನಂತರ ಸ್ನೇಹಿತ ಆಕೆಯ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದ. ಅಲ್ಲದೆ ಗೊತ್ತುಗುರಿ ಇಲ್ಲದಂತೆ ವಾಹನ ಚಲಾಯಿಸುತ್ತಿದ್ದ. ಆಕೆ ಕಿರುಚಿಕೊಳ್ಳಲು ತೊಡಗಿದ್ದಳು. ಅಕ್ಕ ಪಕ್ಕ ಸರಿದು ಹೋಗುತ್ತಿದ್ದ ಬೇರೆ ವಾಹನ ನಿಲ್ಲಿಸಲು ಪ್ರಯತ್ನಿಸಿದ್ದಳು.

ಇತ್ತ ಕಾರು ಹರಿದಿರುವ ದಂಪತಿಗಳೂ ಸಮೀಪದ ವಸತಿ ಸಮುಚ್ಚಯದವರಾಗಿದ್ದು ಅವರು ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆಗ ಯುವತಿಯನ್ನು ವೇಗವಾಗಿ ಚಲಿಸುತ್ತಿದ್ದ ಕಾರಿನಿಂಡ ತಳ್ಳಿದ ವ್ಯಕ್ತಿ ದಂಪತಿಗಳ ಮೇಲೆ ಕಾರನ್ನು ಹರಿಸಿದ್ದಾನೆ.

“ನಾನು ಎಮರ್ಜೆನ್ಸಿ ಸಂಖ್ಯೆಗೆ ಕರೆ ಮಾಡಿದಾಗ ಮೊದಲಿಗೆ ಪೊಲೀಸರಿಂದ ಯಾವುದೇ ಸಹಾಯವನ್ನು ಪಡೆಯಲ್ಲು ಸಾಧ್ಯವಾಗಲಿಲ್ಲ. ಕೋವಿಡ್ ಪರಿಸ್ಥಿತಿಯಿಂದಾಗಿ ಆಂಬ್ಯುಲೆನ್ಸ್‌ಗಳು ಸಹ ಬರಲು ಸಿದ್ಧರಿರಲಿಲ್ಲ. ಆದಾಗ್ಯೂ, ಎರಡನೇ ಪ್ರಯತ್ನದಲ್ಲಿ ಆನಂದಪುರ ಪೊಲೀಸ್ ಠಾಣೆ ಆಂಬುಲೆನ್ಸ್ ವ್ಯವಸ್ಥೆ ಮಾಡಿತ್ತು. “ಗಾಯಾಳುವಾದ ನೀಲಾಂಜನ ಚಟರ್ಜಿಯವರ ಪತಿ ಹೇಳಿದ್ದಾರೆ.

ದಂಪತಿಗಳು ಕೊಲೆ ಯತ್ನದ ಆರೋಪದೊಂದಿಗೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ಬಯಸಿದ್ದರೂ, ಕಿರುಕುಳಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ ಇದನ್ನು ಸೇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಅಲ್ಲದೆ ಎಲ್ಲಾ ಆರೋಪಗಳನ್ನು ಒಳಗೊಂಡಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಿಂಡ ಕಾಲು ಮುರಿತಕ್ಕೊಳಗಾಗಿರುವ ಚಟರ್ಜಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿರುಕುಳಕ್ಕೊಳಗಾದ ಯುವತಿಯನ್ನು ರಕ್ಷಿಸಿ ಮನೆಗೆ ಕಳುಹಿಸಲಾಗಿದೆ ಇನ್ನು ಕೆಲವು ದಿನಗಳ ಹಿಂದೆ ತಾನು ಆರೋಪಿಗಳೊಂದಿಗೆ ಸ್ನೇಹಿತೆಯಾಗಿದ್ದೆನೆಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಅಧಿಕಾರಿ ವಿವರಿಸಿದ್ದಾರೆ

Comments are closed.