ಕರ್ನಾಟಕ

ವಿಜಯಪುರ: 74 ಕೆ.ಜಿ. ಗಾಂಜಾ ಬೆಳೆದ ರೈತನ ಆರೆಸ್ಟ್

Pinterest LinkedIn Tumblr


ವಿಜಯಪುರ: ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಜನಾಳ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ 72 ಕೆ.ಜಿ. ಗಾಂಜಾ ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ.

ರಾಜನಾಳ ಗ್ರಾಮದ ರವಿ ವಾಲಿಕಾರ ಎಂಬ ಆರೋಪಿ ತಮ್ಮ 8 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ, ಕಬ್ಬಿನ ಬೆಳೆ ಬೆಳೆದಿದ್ದಾನೆ.

ಈ ಬೆಳೆಗಳ ಮಧ್ಯೆ ಕೆಲವು ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆ ಬೆಳೆಯಲಾಗಿತ್ತು. ಕಾನೂನು ಬಾಹಿರವಾಗಿ ಮಾದಕ ವಸ್ತು ಗಾಂಜಾ ಬೆಳೆ ಬೆಳೆದಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ಈ ದಾಳಿಯನ್ನು ನಡೆಸಿದರು

ಬಸವನ ಬಾಗೇವಾಡಿ ಡಿಎಸ್ಪಿ ಈ.ಶಾಂತವೀರ ನೇತೃತ್ವದಲ್ಲಿ ನಿಡಗುಂದಿ ಪಿಎಸೈ ಸಿ.ಬಿ.ಚಿಕ್ಕೋಡಿ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದು ಆರೋಪಿ ರವಿ ವಾಲಿಕಾರನನ್ನು ಬಂದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿಡಗುಂದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.