ರಾಷ್ಟ್ರೀಯ

ದೇಶದ ಜಿಡಿಪಿ ಕುಸಿತಕ್ಕೆ ನರೇಂದ್ರ ಮೋದಿ ಸರ್ಕಾರದ ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಕಾರಣ: ರಾಹುಲ್ ಗಾಂಧಿ ವಾಗ್ದಾಳಿ

Pinterest LinkedIn Tumblr

ನವದೆಹಲಿ: ದೇಶದ ಜಿಡಿಪಿಯ ಐತಿಹಾಸಿಕ, ಮಹಾ ಕುಸಿತಕ್ಕೆ ನರೇಂದ್ರ ಮೋದಿ ಸರ್ಕಾರದ ‘ಗಬ್ಬರ್ ಸಿಂಗ್ ಟ್ಯಾಕ್ಸ್’ (ಸರಕು ಮತ್ತು ಸೇವಾ ತೆರಿಗೆ ಜಿಎಸ್ಟಿ) ಕಾರಣ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಗಂಭೀರ ಮತ್ತು ನೇರ ಆರೋಪ ಮಾಡಿದ್ದಾರೆ.

ಜಿಎಸ್ಟಿ ಎಂಬುದು ತೆರಿಗೆ ವ್ಯವಸ್ಥೆಯಲ್ಲ, ಬಡವರು, ಮತ್ತು ಅಸಂಘಟಿತ ವಲಯದ ಮೇಲೆ ದಾಳಿ ಘನ ಘೋರ ದಾಳಿ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.

ಜಿಎಸ್ಟಿಯು ಲಕ್ಷಾಂತರ ಸಣ್ಣ ಉದ್ಯಮಗಳನ್ನು, ಉದ್ಯೋಗಗಳನ್ನು ಕಸಿದುಕೊಂಡಿದೆ.ಯುವಕರ ಮತ್ತು ರಾಜ್ಯಗಳ ಆರ್ಥಿಕತೆಯ ಭವಿಷ್ಯ ಹಾಳು ಮಾಡಿದೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

Comments are closed.