ಕರಾವಳಿ

ಉತ್ತರಕನ್ನಡದ ಶಿರಸಿಯಲ್ಲಿ ಯುವಕರಿಂದ ಗಾಂಜಾ ವಶ!!

Pinterest LinkedIn Tumblr


ಮಾರಕಾಸ್ತ್ರಗಳನ್ನು ಬಳಸಿಕೊಂಡು ದರೋಡೆ ನಡೆಸಲು ಹೊರಟಿದ್ದ ಯುವಕರ ಗ್ಯಾಂಗ್ ಒಂದನ್ನು ಬಂಧಿಸಿರುವ ಘಟನೆ ಶಿರಸಿಯಲ್ಲಿ ನಡೆದಿದೆ.

ಶಿರಸಿ ಯ ವಿದ್ಯಾ ನಗರದ ಮುರುಗೇಶ ಪೂಜಾರಿ , ಕಸ್ತೂರಬಾ ನಗರದ ಮಹಮ್ಮದ್ ಯಾಸೀನ್ , ಸವಣೂರಿನ ಮಯಾನಿ ಮೊಹಲ್ಲಾದ ಅಜ್ಮಿತ್ ಅಸ್ಲಾಂ , ಗುಲಾಮ್ ಮುಸ್ತಫಾ , ಮರ್ದಾನ್ ಶಫಿಸಾಬ ಹಾಗೂ ಮರಾಠಿಕೊಪ್ಪದ ಚರಣ್ ನಾಯ್ಕ ಬಂಧಿತ ಆರೋಪಿಗಳು.

ಕೃತ್ಯದ ಮುಖ್ಯ ಆರೋಪಿಯಾಗಿದ್ದ ವಿದ್ಯಾ ನಗರದ ಮಂಜುನಾಥ ಅಲಿಯಾಸ್ ಮಿಂಟಾ ಮಾರುತಿ ಪೂಜಾರಿ ಪರಾರಿಯಾಗಿದ್ದು, ಬಂಧಿತರಿಂದ ಮೋಟಾರ ಸೈಕಲ್ ಮತ್ತು ಅಂದಾಜು 20ಸಾವಿರ ಮೌಲ್ಯದ 912ಗ್ರಾಂ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಡಿಎಸ್ಪಿ ಜಿ.ಟಿ.ನಾಯಕ, ಸಿಪಿಐ ಪ್ರದೀಪ ಮಾರ್ಗದರ್ಶನದಲ್ಲಿ ಶಿರಸಿ ಮಾರುಕಟ್ಟೆ ಠಾಣೆ ಪಿಎಸ್ಐ ನಾಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

Comments are closed.