
ಗ್ರಾಹಕರನ್ನು ಸೆಳೆಯಲು ಹೋಟೆಲ್ ಹಾಗೂ ಪಬ್ಗಳು ನಾನಾ ಕಸರತ್ತು ನಡೆಸುತ್ತವೆ. ರೆಟ್ರೋ ಶೈಲಿಯ ಸಾಕಷ್ಟು ಹೋಟೆಲ್ ಹಾಗೂ ಬಾರ್ಗಳು ತಲೆ ಎತ್ತಿದ್ದು, ಅದನ್ನು ಪ್ರವೇಶಿಸಿದರೆ ನಿಮಗೆ ಹಳೆ ಕಾಲದ ಫೀಲ್ ಸಿಗಲಿದೆ. ಅಲ್ಲಿರುವ ಬಟ್ಟಲು, ಲೋಟ ಸೇರಿ ಎಲ್ಲವೂ ಹಳೆಕಾಲದಲ್ಲಿ ಬಳಸುವಂಥದ್ದು. ಅದೇ ರೀತಿ ಲಂಡನ್ನಲ್ಲಿ ಪಬ್ ಒಂದಿದೆ. ಇಲ್ಲಿಗೆ ಎಂಟ್ರಿ ಪಡೆಯಬೇಕು ಎಂದರೆ ನೀವು ಬೆತ್ತಲಾಗಲೇಬೇಕು!
ಹೌದು, 1847 ಇಸವಿಗೂ ಮೊದಲೇ ಸ್ಥಾಪನೆಗೊಂಡ ‘ಕೋಚ್ ಆ್ಯಂಡ್ ಹಾರ್ಸಸ್’ ಹೆಸರಿನ ಪಬ್ ಲಂಡನ್ನಲ್ಲಿದೆ. ಮೊದಲಿನಿಂದಲೂ ಗ್ರಾಹಕರಿಗೆ ಭಿನ್ನ ರೀತಿಯಲ್ಲೇ ಸೇವೆ ನೀಡುತ್ತಾ ಬಂದಿರುವ ಈ ಪಬ್ಗೆ ಇತ್ತೀಚೆಗೆ ಹೊಸ ಪರವಾನಿಗೆ ಸಿಕ್ಕಿದೆ. ಇದರನ್ವಯ ಈ ಹೋಟೆಲ್ಅನ್ನು ಬೆತ್ತಲಾಗಿ ಪ್ರವೇಶಿಸಬಹುದಾಗಿದೆ.
ಕೋಚ್ ಆ್ಯಂಡ್ ಹಾರ್ಸಸ್’ ಹೋಟೆಲ್ ದೊಡ್ಡದಿದ್ದು, ಈ ವಿಶೇಷ ಪಬ್ಅನ್ನು ಪ್ರತ್ಯೇಕವಾಗಿ ತೆರೆಯಲಾಗಿದೆ. ಇದನ್ನು ಪ್ರವೇಶಿಸುವ ವೇಳೆ ನೀವು ನಿಮ್ಮ ಸಂಪೂರ್ಣ ಉಡುಪನ್ನು ತೆಗೆದು ಬೀರುವಿನಲ್ಲಿ ಇಡಬೆಕು.
ಇಲ್ಲಿ ನಿಮಗೆ ಮದ್ಯ, ಸಿಗರೇಟು, ಊಟದ ವ್ಯವಸ್ಥೆಯೂ ಇರಲಿದೆ. ಇದನ್ನು ಸದ್ಯ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ನಂತರ ಪಬ್ಅನ್ನು ಸಂಪೂರ್ಣವಾಗಿ ನ್ಯೂಡ್ ಪಬ್ ಸಾಲಿಗೆ ಸೇರಿಸಲು ನಿರ್ಧರಿಸಲಾಗಿದೆ.
“ಹೊಸದನ್ನೇನಾದರೂ ಮಾಡಬೇಕು ಎನ್ನುವುದು ನಮ್ಮ ಆಲೋಚನೆ ಆಗಿತ್ತು. ಅಂತೆಯೇ ಹೀಗೊಂದು ಆಲೋಚನೆ ಹೊಳೆದಿತ್ತು. ಇದಕ್ಕೆ ಅಗತ್ಯವಿರುವ ಒಪ್ಪಿಗೆ ಪಡೆದು ನಾವು ಇದನ್ನು ಆರಂಭಿಸಿದ್ದೇವೆ. ಪಬ್ನಲ್ಲಿ ಬೆತ್ತಲಾಗಿ ನೃತ್ಯ ಮಾಡಬೇಕು ಎಂದು ಅನೇಕರಿಗೆ ಅನ್ನಿಸಿರಬಹುದು. ಅವರ ಕನಸನ್ನು ಸಾಕಾರ ಮಾಡುವ ಉದ್ದೇಶದಿಂದ ನಾವು ಇದನ್ನು ಆರಂಭಿಸಿದ್ದೇವೆ,” ಎಂದು ಪಬ್ ಆಡಳಿತ ಮಂಡಳಿ ಮಾಹಿತಿ ನೀಡುತ್ತದೆ. ಕೊರೋನಾದಿಂದ ಲಾಕ್ಡೌನ್ ಇರುವ ಕಾರಣ ಸದ್ಯ ಈ ಹೋಟೆಲ್ ಮುಚ್ಚಲಾಗಿದೆ.
Comments are closed.