ಮನೋರಂಜನೆ

ಸುಶಾಂತ್ ಸಿಂಗ್ ಸಾವಿಗೆ ಮತ್ತೊಂದು ಟ್ವಿಸ್ಟ್..!

Pinterest LinkedIn Tumblr


ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ಕೇಸಿನ ಸುತ್ತ ಅನುಮಾನದ ಹುತ್ತ ಬೆಳೆದು ನಿಂತಿದೆ.

ಇದೀಗ ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ನೀಡಿರುವ ಹೇಳಿಕೆ ಬಾಲಿವುಡ್​ನಲ್ಲಿ ಸಂಚಲನ ಕ್ರಿಯೇಟ್ ಮಾಡಿದೆ .

ಸುಶಾಂತ್ ಸಿಂಗ್ ಪಾರ್ಥೀವ ಶರೀರವನ್ನು ಆಸ್ಪತ್ರೆಗೆ ತಂದಾಗ ಅವರ ಕಾಲು ಮುರಿದಿತ್ತು, ದೇಹದ ಮೇಲೆ ಗಾಯದ ಗುರುತುಗಳಿದ್ದವು, ಅದು ಕೊಲೆ ಅಂತಾ ವೈದ್ಯರು ಹೇಳುತ್ತಿದ್ದನ್ನು ಕೇಳಿಸಿಕೊಂಡ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಹೇಳಿಕೆ ನೀಡಿದ್ದು, ಇದನ್ನು ನ್ಯೂಸ್ ನೇಷನ್ ವರದಿ ಮಾಡಿದೆ.

ಸದ್ಯ ಈ ವಿಡಿಯೋವನ್ನು ಸುಶಾಂತ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ಕಿರ್ತಿ ತಮ್ಮ ಟ್ವಟರ್ ಖಾತೆಯಲ್ಲಿ ಶೇರ್​ ಮಾಡಿದ್ದು, ಎಲ್ಲೆಡೆ ಈ ವಿಡಿಯೋ ಹರಿದಾಡುತ್ತಿದೆ.

ಸುಶಾಂತ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಹಿರಿಯ ವೈದ್ಯರು ಅದು ಸೂಸೈಡ್​ ಅಲ್ಲ, ಕೊಲೆ ಅಂತ ಹೇಳಿದ್ದರು, ಆದ್ರೆ ಪೊಲೀಸರು ಆತ್ಮಹತ್ಯೆ ಅಂತಾ ಘೋಷಿಸಿದ್ದಾರೆ. ಕಾಲುಗಳನ್ನು ಮುರಿದಿರುವುದನ್ನು ಡಾಕ್ಟರ್ ಕೂಡಾ ಒಪ್ಪಿಕೊಂಡಿದ್ದಾರೆ ಆದರೆ, ಕೇಸ್ ನಲ್ಲಿ ಅದನ್ನು ಬಿಂಬಿಸಿಲ್ಲ ಅಂತಾ ಹೇಳಿದ್ದಾರೆ.

ಸದ್ಯ ಸಿಬಿಐ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಈ ಸಂಬಂಧ ಸುಶಾಂತ್ ಮಾಜಿ ಗೆಳತಿ ರೀಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೌಕಿ ಚಕ್ರವರ್ತಿಯನ್ನು ವಿಚಾರಣೆ ನಡೆಸಿದ್ದಾರೆ.

Comments are closed.