ಕರ್ನಾಟಕ

ಕಚೇರಿಯಲ್ಲೇ ಸಹೋದ್ಯೋಗಿಯೊಂದಿಗೆ ತಹಶೀಲ್ದಾರ್​​ ರೊಮ್ಯಾನ್ಸ್​..!!

Pinterest LinkedIn Tumblr


ಸರ್ಕಾರಿ ಕಚೇರಿಯಲ್ಲೇ ತಹಶೀಲ್ದಾರ್ ತಮ್ಮ​​ ಸಹೋದ್ಯೋಗಿಗೆ ಕಿಸ್ಸಿಂಗ್ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಠಗಿಯಲ್ಲಿ ನಡೆದಿದೆ.

ತಮ್ಮ ಕಚೇರಿಗೆ ಬಂದು ಒಬ್ಬಂಟಿಯಾಗಿ ನಿಂತಿದ್ದ ಮಹಿಳಾ ಸಿಬ್ಬಂದಿಗೆ ಏಕಾಏಕಿ ಬಂದು ಕೊಷ್ಠಗಿಯ ತಹಶೀಲ್ದಾರ್ ಗುರು ಬಸವರಾಜ್​​ ​​​ ಕಿಸ್​ ಮಾಡಿದ್ದಾರೆ.

ಇದೀಗ ಕೊಪ್ಪಳದ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್​ ಆಗಿ ಕಾರ್ಯ ನಿರ್ವಯಿಸುತ್ತಿರುವ ಬಸವರಾಜ್​​ ರವರ ರಾಸಲೀಲೆ ಸಿಸಿ ಟಿವಿಯಲ್ಲಿ ರೆಕಾರ್ಡ್​ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

‘ಸರ್ಕಾರಿ ಕೆಲಸವೆಂದರೆ ದೇವರ ಕೆಲಸ. ಕೆಲಸ ಮಾಡುವ ಜಾಗ ದೇವಸ್ಥಾನ ಇದ್ದಂತೆ’ ಎಂದು ಹೇಳಲಾಗುತ್ತದೆ. ಆದರೆ ಉನ್ನತ ಅಧಿಕಾರಿ ಸ್ಥಾನದಲ್ಲಿದ್ದು, ಒಂಟಿ ಮಹಿಳೆ ಜೊತೆ ತಹಶೀಲ್ದಾರ್ ಗುರು ಬಸವರಾಜ್​​ ನಡೆದು ಕೊಂಡಿರುವ ಅಸಭ್ಯವರ್ತನೆಯನ್ನು ಖಂಡಿಸಿ, ಅವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಕೆಲ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗುರುಬಸವರಾಜ್ ಕುಷ್ಟಗಿ ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಂದ ವರ್ಗಾವಣೆಯಾಗಿ ಈಗ ಗುರುಬಸವರಾಜ್ ಸದ್ಯ ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿದ್ದಾರೆ.

Comments are closed.