
ಮಂಗಳೂರು : 73ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಘನಿಕೇತನ ಇದರ ಗಣೇಶೋತ್ಸವ ಪ್ರಯುಕ್ತ ಸಂಘನಿಕೇತನದಲ್ಲಿ ಮಂಗಳವಾರ ಬೆಳ್ಳಿಗ್ಗೆ ಶ್ರೀ ಮಹಾ ಗಣಪತಿ ದೇವರ ಪ್ರೀತ್ಯರ್ಥ ಲೋಕ ಕಲ್ಯಾಣಾರ್ಥ ಸಲುವಾಗಿ ” ಉಷೆ ಪೂಜೆ “ ಕಾರ್ಯಕ್ರಮ ಸರಳ ರೀತಿಯಲ್ಲಿ ಜರಗಿತು .
ಪ್ರಾತಃ ಕಾಲ ಸ್ವಯಂಸೇವಕರಿಂದ ಸಾವಿರಾರು ಹಣತೆ ದೀಪಗಳನ್ನು ಹಚ್ಚಿ ಸಭಾಂಗಣವನ್ನು ದೀಪಗಳಿಂದ ಅಲಂಕರಿಸಲಾಯಿತು , ಬಳಿಕ ಸಂಘದ ಸ್ವಯಂ ಸೇವಕರು ಹಾಗೂ ಗಣೇಶೋತ್ಸವದ ಕಾರ್ಯಕರ್ತರು ಶ್ರೀ ದೇವರ ಭಜನಾ ಸಂಕೀರ್ತನೆ ನಡೆದು 6 ಗಂಟೆಗೆ ಶ್ರೀ ದೇವರ ಮಂಗಳಾರತಿ ನಡೆಯಿತು.

ಪ್ರತೀ ವರ್ಷ ಈ ಕಾರ್ಯಕ್ರಮದಲ್ಲಿ ಸಾವಿರಾರು ಭಜಕರು ಪಾಲ್ಗೊಳ್ಳುತ್ತಿದ್ದು ಈ ಬಾರಿ ಕೊರೋನಾ ಮಹಾಮಾರಿ ಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಭಜಕರಿಗೆ ಪಾಲ್ಗೊಳ್ಳುವ ಅವಕಾಶವಿರಲಿಲ್ಲ, ಅತ್ಯಂತ ಸರಳ ರೀತಿಯಲ್ಲಿ ಪೂಜಾ ಕೈಕರ್ಯಗಳು ಜರಗಿದವು .
ಈ ಸಂದರ್ಭದಲ್ಲಿ ಪ್ರಮುಖರಾದ ವಿನೋದ್ ಶೆಣೈ, ರಘುವೀರ್ ಕಾಮತ್ , ಸತೀಶ್ ಪ್ರಭು , ಸುರೇಶ್ ಕಾಮತ್ , ಜೀವನರಾಜ್ ಶೆಣೈ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು .
ಚಿತ್ರ ಗಳು : ಮಂಜು ನೀರೇಶ್ವಾಲ್ಯ
Comments are closed.