
ಬೆಂಗಳೂರು: ಸಚಿವ ಸ್ಥಾನ ಬಿಡುವುದು ತ್ಯಾಗವೂ ಅಲ್ಲ ಬಲಿದಾನವೂ ಅಲ್ಲ. ಪಕ್ಷದಲ್ಲಿ ಎಲ್ಲ ಜವಾಬ್ದಾರಿಗಳೂ ಅನಿವಾರ್ಯ ಎಂದು ಸಚಿವ ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಿನ ಪರಿಸ್ಥಿತಿಯಲ್ಲಿ ಮಂತ್ರಿಮಂಡಲ ವಿಸ್ತರಣೆ ಆದರೂ ಸರಿ. ಪುನಾರಚನೆ ಮಾಡಿದರೂ ಓಕೆ ನಮಗೆ ಕಾರ್ಯಕರ್ತ ಎನ್ನುವ ಸ್ಥಾನ ಖಾಯಂ. ಪಕ್ಷ ಯಾವುದೇ ಜವಬ್ದಾರಿ ನೀಡಿದರೂ ಸರಿ. ಖುರ್ಚಿ ಬಿಡುವುದು, ಹಿಡಿಯುವುದು ಎಲ್ಲಾ ತ್ಯಾಗ ಬಲಿದಾನ ಅಲ್ಲ. ತ್ಯಾಗ ಬಲಿದಾನಕ್ಕೆ ದೊಡ್ಡ ಹೆಸರಿದೆ. ಸೈನಿಕರ ಜೀವನ ತ್ಯಾಗ ಬಲಿದಾನದಿಂದ ಕೂಡಿದೆ ಎಂದು ಮಾರ್ಮಿಕವಾಗಿ ನುಡಿದರು.
ಸಚಿವರ ಮೌಲ್ಯಮಾಪನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಸಚಿವರ ಆಂತರಿಕ ಮೌಲ್ಯಮಾಪನ ಒಳ್ಳೆಯದು. ಆದರೆ ಈ ಕುರಿತು ತಮ್ಮಲ್ಲಿ ಮಾಹಿತಿ ಇಲ್ಲ. ಆದರೆ ನನಗೆ ನಾನೇ ನನ್ನ ಮೌಲ್ಯಮಾಪನ ಮಾಡಿಕೊಂಡು ಅದನ್ನು ಜನರ ಮುಂದೆ ಇಡುತ್ತೇನೆ ಎಂದರು.
Comments are closed.