ರಾಷ್ಟ್ರೀಯ

ದೇಶದಲ್ಲಿ ಕೊರೋನಾ ಚೇತರಿಕೆ ಪ್ರಮಾಣ ಶೇ. 75ಕ್ಕೆ ಏರಿಕೆ

Pinterest LinkedIn Tumblr


ನವದೆಹಲಿ: ಕಳೆದ 24 ಗಂಟೆಗಳಲ್ಲಿ ಕೊವಿಡ್‍ನ 69,239 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ ಭಾನುವಾರ 30 ಲಕ್ಷ ದಾಟಿದೆ.

ಆದರೆ ಚೇತರಿಕೆ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದ್ದು, ಸದ್ಯ ಈ ಪ್ರಮಾಣ ಶೇ ಸುಮಾರು ಶೇ. 75ರಷ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ ದೇಶದಲ್ಲಿ ಈವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 30,44,940ಕ್ಕೆ ಏರಿದ್ದು, ಇದರಲ್ಲಿ 7,07,668 ಸಕ್ರಿಯ ಪ್ರಕರಣಗಳಿವೆ. ಒಟ್ಟು ಚೇತರಿಕೆ ಸಂಖ್ಯೆ 22,80,566 ರಷ್ಟಿದ್ದು, ಚೇತರಿಕೆ ಪ್ರಮಾಣ ಶೇ 74.90ಕ್ಕೆ ತಲುಪಿದೆ.

ಒಂದೇ ದಿನ ಜನರು ಚೇತರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿಲವಾಯ ಮಾಹಿತಿ ನೀಡಿದೆ.

Comments are closed.