ಅಂತರಾಷ್ಟ್ರೀಯ

5 ವರ್ಷ ಬ್ರಿಟನ್​ ಸರ್ಕಾರಕ್ಕೆ ವಂಚಿಸಿದ ಪಾಕ್​ ಮಹಿಳೆ

Pinterest LinkedIn Tumblr


ನವದೆಹಲಿ: ನಿರಂತರವಾಗಿ ಐದು ವರ್ಷಗಳವರೆಗೆ ಬ್ರಿಟನ್​ ಸರ್ಕಾರಕ್ಕೆ ವಂಚಿಸಿದ ಪಾಕ್​ ಮಹಿಳೆ ಶಿಕ್ಷೆಯಿಂದ ಪಾರಾಗಿದ್ದಾಳೆ….!

36 ವರ್ಷದ ಸಾಬಾ ಮಹಮೂದ್​ 8 ಮಕ್ಕಳ ತಾಯಿ. ಐದು ವರ್ಷಗಳವರೆಗೆ ಒಂದು ಕೋಟಿ ರೂ. ಗೂ ಹೆಚ್ಚು ಮೊತ್ತವನ್ನು ( ಅಂದಾಜು 1 ಲಕ್ಷ ಪೌಂಡ್​) ಅಕ್ರಮವಾಗಿ ಪಡೆದಿದ್ದಾಳೆ.

ಬ್ರಿಟನ್​ನಲ್ಲಿ ಕಡುಬಡವರಿಗೆ ಸರ್ಕಾರದಿಂದಲೇ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ಆರ್ಥಿಕ ನೆರವು ನೀಡಲಾಗುತ್ತದೆ. ಅಂತೆಯೇ, ಸಾಬಾ ಚಿಕ್ಕಮ್ಮ ಪಾಕಿಸ್ತಾನದಲ್ಲಿ ನೆಲೆಸಿದ್ದರೂ ಆತನ ಪರವಾಗಿ ಅಂಗವಿಕಲರ ಜೀವನಾಂಶ ಹಾಗೂ ಉದ್ಯೋಗ ಅನುದಾನವನ್ನು (ಅಂದಾಜು 94 ಲಕ್ಷ ರೂ.) ಪಡೆದುಕೊಂಡಿದ್ದಾಳೆ.
ಇದಲ್ಲದೇ. ಅವರು ಬ್ರಿಟನ್​ನಲ್ಲಿ ಇಲ್ಲ ಎನ್ನುವುದನ್ನು ತಿಳಿಸದೇ, ಅವರ ನಾಮಿನಿಯಾಗಿ ನೇಮಕಗೊಂಡು ಹಣ ನೇರವಾಗಿ ತನ್ನ ಬ್ಯಾಂಕ್​ ಖಾತೆಗೆ ಬರುವಂತೆ ಮಾಡಿಕೊಂಡಿದ್ದಾಳೆ.

ವಿಚಿತ್ರವೆಂದರೆ, ಈ ಅಕ್ರಮ ಬಯಲಿಗೆ ಬಂದರೂ ಶಿಕ್ಷೆಯಿಂದ ಆಕೆ ಪಾರಾಗಿದ್ದಾಳೆ. ಏಕೆಂದರೆ, ಇಲ್ಲಿ ಸಂತ್ರಸ್ತರು ಯಾರೂ ಇಲ್ಲ ಎನ್ನುವುದು ಬ್ರಿಟನ್​ ಕೋರ್ಟ್​ ತಿಳಿಸಿದೆ.
ಆರಂಭದಲ್ಲಿ ಆಕೆಗೆ 16 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದರೂ, ಅದನ್ನು 18 ತಿಂಗಳವರೆಗೆ ಅದನ್ನು ಅನೂರ್ಜಿತಗೊಳಿಸಿದೆ. ಬದಲಾಗಿ, 15 ದಿನ ಪುನರ್ವಸತಿ ಶಿಬಿರದಲ್ಲಿ ಕಳೆಯುವ ಹಾಗೂ 150 ಗಂಟೆಗಳ ಸಂಬಳರಹಿತ ಕೆಲಸ ಮಾಡುವಂತೆ ಆದೇಶ ನೀಡಿದೆ.

ಆಕೆಗೆ ಒಂದು ವರ್ಷದಿಂದ 13 ವರ್ಷದವರೆಗಿನ ಎಂಟು ಮಕ್ಕಳಿದ್ದಾರೆ ಹಾಗೂ ಗಂಡ ಮನೋವ್ಯಾಧಿಗೆ ತುತ್ತಾಗಿರುವುದರಿಂದ ಈ ವಿನಾಯ್ತಿ ನೀಡಿದೆ.

Comments are closed.