ಕರಾವಳಿ

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನಾಳಿನ ಕಾರ್ಯಕ್ರಮಗಳ ವಿವರ

Pinterest LinkedIn Tumblr

ಮಂಗಳೂರು ಆಗಸ್ಟ್ 20 : ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ದ.ಕ. ಜಿಲ್ಲಾ ಪ್ರವಾಸ ಹಾಗೂ ನಾಳಿನ ಕಾರ್ಯಕ್ರಮಗಳ ವಿವರ ಈ ರೀತಿ ಇದೆ.

ಆಗಸ್ಟ್ 21 ರಂದು ಮಧ್ಯಾಹ್ನ 2 ಗಂಟೆಗೆ ಬಂಟ್ವಾಳ ಪ್ರವಾಸಿ ನಿರೀಕ್ಷಣಾ ಮಂದಿರದಲ್ಲಿ ಬಂಟ್ವಾಳ ಪುರಸಭೆಯ ಕುಡಿಯುವ ನೀರಿನ ಯೋಜನೆ ಕುರಿತು ಶಾಸಕರು, ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವರು.

ಮಧ್ಯಾಹ್ನ 3 ಗಂಟೆಗೆ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ಕೋವಿಡ್ ಚಿಕಿತ್ಸೆಯ ಕುರಿತು ಪರಿಶೀಲನೆ ನಡೆಸಲಿರುವರು. ಸಂಜೆ 6 ಗಂಟೆಗೆ ಬಂಟ್ವಾಳದಿಂದ ಕೋಟಾಕ್ಕೆ ತೆರಳುವರು.

Comments are closed.