ಕರ್ನಾಟಕ

ಸಂಪೂರ್ಣ ಭರ್ತಿಯಾದ ಕೆಆರ್​ಎಸ್ ಜಲಾಶಯ

Pinterest LinkedIn Tumblr


ಮಂಡ್ಯ: ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಕೆ.ಆರ್.ಎಸ್. ಜಲಾಶಯ ಸಂಪೂರ್ಣ ಭರ್ತಿ ಯಾಗಿದೆ. 124 ಗರಿಷ್ಠ ಅಡಿ ಎತ್ತರ ಜಲಾಶಯ ಇದೀಗ ಭರ್ತಿಯಾಗಿ ನೀರಿನಿಂದ ತುಂಬಿ ತುಳುಕುತ್ತಿದೆ. ಈ ಬಾರಿಯ ಭರ್ಜರಿ ಮುಂಗಾರು ಮಳೆಯಿಂದ 15 ದಿನದಲ್ಲೇ ಜಲಾಶಯ ಭರ್ತಿಯಾಗಿದೆ. ಜಲಾಶಯ ಭರ್ತಿಯಾಗಿರುವುದು ಜಿಲ್ಲೆಯ ರೈತರ ಸಂತಸಕ್ಕೆ‌ ಕಾರಣವಾಗಿದ್ದು, ಈ ಬಾರಿ ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ.

ಮಂಡ್ಯ ಜಿಲ್ಲೆಯ ಜೀವನಾಡಿಯಾದ ಕೆ.ಆರ್.ಎಸ್. ಜಲಾಶಯ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ 15 ದಿನದಲ್ಲೇ ಭರ್ತಿಯಾಗಿದೆ. ಇದು ಜಿಲ್ಲೆಯ ರೈತರ ಸಂತಸಕ್ಕೆ ಕಾರಣವಾಗಿದೆ. 124 ಗರಿಷ್ಠ ಅಡಿ ಎತ್ತರದ ಕೆ.ಆರ್.ಎಸ್.ಜಲಾಶಯಇದೀಗ ನೀರಿನಿಂದ ತುಂಬಿ‌ ತುಳುಕುತ್ತಿದೆ. ಜಲಾಶಯಕ್ಕೆ ಬಾಗೀನ ಅರ್ಪಿಸಲು ಈಗಾಗಲೇ ನೀರಾವರಿ ಇಲಾಖೆಯ ಅಧಿಕಾರಿಗಳು ಸಿದ್ದತೆ ನಡೆಸುತ್ತಿದ್ದು, ಸಿಎಂ ಬಿಎಸ್​ವೈ ಅವರ ದಿನಾಂಕಕ್ಕೆ ಕಾಯುತ್ತಿದ್ದಾರೆ. ಅಲ್ಲದೇ ಇದೇ ತಿಂಗಳು‌ ಸಿಎಂ ಬಾಗೀನ ಅರ್ಪಿಸುವ ಕಾರ್ಯಕ್ಕೆ ರೂಪುರೇಷೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ಇನ್ನು ಒಂದು ಕಡೆ ತುಂಬಿದ ಕಾವೇರಿಗೆ ಬಾಗೀನ ಅರ್ಪಣೆ ಕಾರ್ಯಕ್ರಮಕ್ಕೆ ಸಿದ್ದತೆಗಳು ನಡೆಯುತ್ತಿದ್ದರೆ ಮತ್ತೊಂದು ಕಡೆ ಅಪರಿಚಿತನೊಬ್ಬ ಡ್ಯಾಂ ನ ಬಿಗಿ ಭದ್ರತೆ ನಡುವೆ ಡ್ರೋಣ್ ಕ್ಯಾಮರಾ ಮೂಲಕ ತುಂಬಿದ ಕೆಆರ್​ಎಸ್ ಜಲಾಶಯ ಚಿತ್ರೀಕರಿಸಿದ್ದಾನೆ. ಅಲ್ಲದೇ ಚಿತ್ರೀಕರಿಸಿದ ದೃಶ್ಯವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ. ಡ್ಯಾಂನ ಸುರಕ್ಷತಾ ದೃಷ್ಟಿಯಿಂದ ಡ್ಯಾಂ ಮೇಲ್ಭಾಗ ಸೇರಿದಂತೆ ಡ್ಯಾಂ ಸುತ್ತಲಿನ 2 ಕಿ.ಮೀ. ವ್ಯಾಪ್ತಿಯು ನಿಷೇಧಿತ ವಲಯವಾಗಿ ಸರ್ಕಾರ ಈ ಹಿಂದೆಯೇ ಘೋಷಣೆ ಮಾಡಿದೆ. ಡ್ಯಾಂ ಭದ್ರತೆಗಾಗಿ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜನೆ ಕೂಡ ಮಾಡಲಾಗಿದೆ. ಇಷ್ಟೆಲ್ಲ ಭದ್ರತೆ ಇದ್ದರೂ ಅಪರಿಚಿತ ವ್ಯಕ್ತಿ ಡ್ರೋಣ್ ಕ್ಯಾಮರಾದಲ್ಲಿ ಜಲಾಶಯದ ವಿಡಿಯೋ ಮಾಡಿರೋದು ಹೇಗೆ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ. ಇದಕ್ಕಾಗಿ ಜಲಾಶಯದ ಅಧಿಕಾರಿಗಳು ಇದೀಗ ಭದ್ರತಾ ಲೋಪ ಕುರಿತಾಗಿ ದೂರು ನೀಡಿದ್ದಾರೆ.

ಒಟ್ಟಿನಲ್ಲಿ ರೈತರ ಜೀವನಾಡಿಯಾಗಿರುವ ಕೆಆರ್​ಎಸ್​ ಜಲಾಶಯ ತುಂಬಿರುವುದು ಜಿಲ್ಲೆಯ ರೈತರಲ್ಲಿ ಸಂತಸ ಮೂಡಿಸಿದೆ. ಇದರ ಜೊತೆಗೆ ಇಷ್ಟೆಲ್ಲಾ ಭದ್ರತೆ ಇದ್ದರೂ ಅಪರಿಚಿತ ವ್ತಕ್ತಿಯೊಬ್ಬ ಡ್ರೋಣ್ ಕ್ಯಾಮರಾ ಬಳಸಿ ಡ್ಯಾಂ ವಿಡಿಯೋ ಮಾಡಿರುವುದು ಡ್ಯಾಂ ಭದ್ರತೆ ಕುರಿತಾಗಿ ಆತಂಕ‌ ಮೂಡಿಸಿದೆ.

Comments are closed.