
ನವದೆಹಲಿ: ಭಾರತದಲ್ಲಿನ ಬ್ಯಾಂಕುಗಳಿಗೆ 9 ಸಾವಿರ ಕೋಟಿ ರೂಪಾಯಿಗಳನ್ನು ವಂಚಿಸಿರುವ ಆರೋಪ ಹಾಗೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ 300 ಕೋಟಿ ರೂ.ಗಳನ್ನು ತಮ್ಮ ಮಕ್ಕಳ ಖಾತೆಗೆ ವರ್ಗಾಯಿಸಿರುವ ಆರೋಪ ಹೊತ್ತ ಮದ್ಯದ ದೊರೆ ವಿಜಯ ಮಲ್ಯ ಪ್ರಕರಣ ಇದೀಗ ಕುತೂಹಲದ ತಿರುವು ಪಡೆದುಕೊಂಡಿದೆ.
ಇವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಕೇಸಿಗೆ ಸಂಬಂಧಿಸಿದ ಕೆಲವೊಂದು ದಾಖಲೆಗಳು ನಾಪತ್ತೆಯಾಗಿವುದು ಬೆಳಕಿಗೆ ಬಂದಿದೆ.
ನ್ಯಾಯಾಲಯದ ಆದೇಶ ಉಲ್ಲಂಘಿಸಿ 300 ಕೋಟಿ ರೂ.ಗಳನ್ನು ತಮ್ಮ ಮಕ್ಕಳ ಖಾತೆಗೆ ವರ್ಗಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ಕೆಲವೊಂದು ದಾಖಲೆಗಳು ಸುಪ್ರೀಂಕೋರ್ಟ್ನಲ್ಲಿ ಕಾಣೆ ಆಗಿರುವ ಸಂಗತಿ ಬೆಳಕಿಗೆ ಬಂದಿದೆ.
ಮಲ್ಯ ಬ್ಯಾಂಕುಗಳಿಗೆ ವಂಚನೆ ಹಾಗೂ ಅಕ್ರಮ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಇವರ ದೋಷಿ ಎಂದು ಸುಪ್ರೀಂಕೋರ್ಟ್ 2017ರಲ್ಲಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ವಿಜಯಮಲ್ಯ ಅದೇ ಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಇರುವ ಕೆಲವೊಂದು ಮಹತ್ವದ ದಾಖಲೆಗಳು ಮಿಸ್ ಆಗಿರುವುದು ಇದೀಗ ಬೆಳಕಿಗೆ ಬಂದಿದೆ.
2017ರಲ್ಲಿ ಸಲ್ಲಿಸಿದ್ದ ಈ ಅರ್ಜಿಯು ಕೋರ್ಟ್ನಲ್ಲಿ ಇದುವರೆಗೆ ವಿಚಾರಣೆಗೆ ಬಂದಿರಲಿಲ್ಲ. ಈ ಬಗ್ಗೆ ಕಾರಣ ಕೇಳಿ ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಹಾಗೂ ಅಶೋಕ್ ಭೂಷಣ್ ಅವರನ್ನು ಒಳಗೊಂಡ ಪೀಠ, ಸುಪ್ರೀಂಕೋರ್ಟ್ ರೆಜಿಸ್ಟ್ರಿಗೆ ವಿವರಣೆ ಕೇಳಿತ್ತು. ಆಗಲೇ ದಾಖಲೆಗಳು ಮಿಸ್ ಆಗಿರುವುದು ತಿಳಿದುಬಂದಿದೆ,
ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಇದೇ 20ರಂದು ನಿಗದಿಪಡಿಸಿದೆ.
Comments are closed.