ಕರ್ನಾಟಕ

ಎಸ್​ಐ ಆತ್ಮಹತ್ಯೆ ಪ್ರಕರಣ: ಸ್ಟೋಟಕ ಹೇಳಿಕೆ ನೀಡಿದ ಎಚ್​.ಡಿ. ರೇವಣ್ಣ

Pinterest LinkedIn Tumblr


ಹಾಸನ: ಚನ್ನರಾಯಪಟ್ಟಣ ನಗರ ಠಾಣೆ ಪಿಎಸ್​ಐ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸ್ಪೋಟಕ ಹೇಳಿಕೆಯನ್ನು ನೀಡಿದ್ದು, ಅನುಮಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿ, ಮೇಲಾಧಿಕಾರಿ ಒತ್ತಡದಿಂದ ಪಿಎಸ್​ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ನನಗೆ ತಿಳಿದಿದೆ. ಪಿಎಸ್​ಐ ಕಿರಣ್ ಮೊಬೈಲ್ ಅನ್ನು ಐಜಿ ವಶಪಡಿಸಿಕೊಂಡಿದ್ದಾರೆ. ಅವರ ಮನೆಯವ ಸಮ್ಮುಖದಲ್ಲಿ ಮೊಬೈಲ್ ಮಾಹಿತಿ ಮಹಜರ್ ತೆಗೆದಿಲ್ಲ. ಅದನ್ನು ತೆಗೆಯಬೇಕಿತ್ತು ಎಂದಿದ್ದಾರೆ.

ಜಿಲ್ಲೆಯಲ್ಲಿ ಪೊಲೀಸ್ ವರ್ಗಾವಣೆ ದಂಧೆ ಕೇವಲ ಒಬ್ಬ ಶಾಸಕ ಹಾಗೂ ಓರ್ವ ಸರ್ಕಲ್ ಇನ್ಸ್​ಪೆಕ್ಟರ್ ಕೈಯಲ್ಲಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಪ್ರಮಾಣಿಕ ಅಧಿಕಾರಿಗೆ ಎಲ್ಲಿ ಬೆಲೆ ಇದೆ ಎಂದು ವಾಗ್ದಾಳಿ ನಡೆಸಿದರು.

Comments are closed.