
ಬೆಂಗಳೂರು (ಜು.30): ಮಲಯಾಳಂನ ಖ್ಯಾತ ನಟ ಅನಿಲ್ ಮುರಳಿ ಅವರು ಇಂದು ಕೊಚ್ಚಿಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಅನಿಲ್ ಅವರು ಕಳೆದ ಕೆಲ ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅನಿಲ್ ಮುರಳಿ ಇಂದು ಮೃತಪಟ್ಟಿದ್ದಾರೆ. ಅನಿಲ್ ಅವರು ಹೆಂಡತಿ ಸುಮಾ, ಮಗ ಆದಿತ್ಯ ಹಾಗೂ ಮಗಳು ಅರುಂಧಿತಿಯನ್ನು ಅಗಲಿದ್ದಾರೆ.
1993ರಲ್ಲಿ ತೆರೆಕಂಡ ಕನ್ಯಾಕುಮಾರಿಯಿಲ್ ಒರು ಕವಿತಾ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಅನಿಲ್ ಮುರಳಿ ಕಾಲಿಟ್ಟಿದ್ದರು. ಮಾಲಿವುಡ್ನಲ್ಲಿ ತಮ್ಮ ನೆಗೆಟಿವ್ ಪಾತ್ರಗಳ ಮೂಲಕವೇ ಅವರು ಹೆಸರು ಮಾಡಿದ್ದರು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಖ್ಯಾತಿ ಇವರಿಗಿದೆ.
ಅನಿಲ್ ಮುರಳಿ ಸಾವಿಗೆ ಇಸಂಪೂರ್ಣ ಮಲಯಾಳಂ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ. ಪೃಥ್ವಿರಾಜ್ ಸೇರಿದಂತೆ ಅನೇಕ ಕಲಾವಿದರು ಅನಿಲ್ ಮುರುಳಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ. . ನೆರರಿಯನ್ ಸಿಬಿಐ, ಲಯನ್, ಕ್ಲಾಸ್ ಮೇಟ್ಸ್, ರನ್ ಬೇಬಿ ರನ್, ಅಯಾಲುಮ್ ಇವರ ಕೆಲ ಪ್ರಮುಖ ಚಿತ್ರಗಳು.
Comments are closed.