ಕರ್ನಾಟಕ

ರಾಜಕೀಯದ ವಿಚಾರದಲ್ಲಿ ಹೆಚ್. ವಿಶ್ವನಾಥ್‌ ದುರಂತ ಅಂತ್ಯ ಕಂಡಾಗಿದೆ: ವ್ಯಂಗ್ಯವಾಡಿದ ಸಾ ರಾ ಮಹೇಶ್‌

Pinterest LinkedIn Tumblr

ಮೈಸೂರು: ರಾಜಕೀಯದ ವಿಚಾರದಲ್ಲಿ ಹೆಚ್. ವಿಶ್ವನಾಥ್‌ ದುರಂತ ಅಂತ್ಯ ಕಂಡಾಗಿದೆ ಎಂದು ಶಾಸಕ ಸಾ ರಾ ಮಹೇಶ್‌ ಹಳ್ಳಿಹಕ್ಕಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹೆಚ್.ವಿಶ್ವನಾಥ್‌ ರಾಜಕೀಯದಲ್ಲಿ ದುರಂತ ಅಂತ್ಯ ಕಂಡಾಗಿದೆ. ನಮ್ಮ ರಾಜಕೀಯದಲ್ಲಿ ಮತದಾರರಿಗೆ,ನಾಯಕರಿಗೆ, ಕ್ಷೇತ್ರದ ಜನರಿಗೆ ದ್ರೋಹ ಮಾಡಿದರೇ ಅವರಿಂದ ಸಿಗುವ ಉತ್ತರವೇನೂ ಎಂಬುದಕ್ಕೆ ವಿಶ್ವನಾಥ್‌ ಉದಾಹರಣೆ. ರಾಜಕಾರಣಿಗೆ ಪ್ರಾಮಾಣಿಕತೆ ಇಲ್ಲ ಅಂದ್ರೆ ಏನಾಗುತ್ತೆದೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಬೇಕಿಲ್ಲ. ಇನ್ನು ಅವರಿಗೆ ಬಾಕಿ ಇರುವುದು ಜಿಲ್ಲಾಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಫರ್ಧಿಸುವುದು ಮಾತ್ರ ಎಂದು ಲೇವಡಿ ಮಾಡಿದರು.

ನಮ್ಮ ಜಿಲ್ಲೆಯ ಎಲ್ಲ ಪಕ್ಷದ ರಾಜಕಾರಣಿಗಳಿಗೆ ವಿಶ್ವನಾಥ್‌ ಸ್ಥಿತಿ ಸ್ಪಷ್ಟ ಉದಾಹರಣೆಯಾಗಿದೆ. ಜೆಡಿಎಸ್ ನಾಯಕರು ಕಾರ್ಯಕರ್ತರು ನೀಡಿದ ಭಿಕ್ಷೆಯಿಂದ ಅವರು ಎರಡು ವರ್ಷ ಚಲಾವಣೆಯಲ್ಲಿದ್ದರು. ಇವರು ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಾರೆ. ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ‌ ಎಂದರು.

ಮೈಮುಲ್ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಹೈಕೋರ್ಟ್ ನೇಮಕಾತಿ ಪ್ರಕ್ರಿಯೆಗೆ 3 ವಾರಗಳ ನಿಷೇಧಾಜ್ಞೆ ಹೇರಿದೆ. ಇದರಿಂದಾಗಿ ಮೈಮುಲ್ ಎಲ್ಲ ಪ್ರಕ್ರಿಯೆಗೆ ತಡೆ ಬಿದ್ದಿದೆ. ನಮ್ಮ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು‌. ಪಾರದರ್ಶಕವಾಗಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕು‌.ನ್ಯಾಯಯುತವಾಗಿ ನೇಮಕಾತಿ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕ್ರಮ ಕೈಗೊಳ್ಳಬೇಕು. ಹಣ ಕಳೆದುಕೊಂಡವರ ಜೊತೆ ನಾವು ಇದ್ದೇ ಇರುತ್ತೇವೆ ಎಂದರು‌.

Comments are closed.