ರಾಷ್ಟ್ರೀಯ

ದಿಲ್ಲಿಯಲ್ಲಿ ಈ ತಿಂಗಳ ಅಂತ್ಯಕ್ಕೆ 1 ಲಕ್ಷ ಕೊರೋನಾ ಪ್ರಕರಣಗಳು: ತಜ್ಞರ ಸಮಿತಿ

Pinterest LinkedIn Tumblr


ನವದೆಹಲಿ (ಜೂ.7): ದೆಹಲಿಯಲ್ಲಿ ಕೊರೋನಾ ವೈರಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗ ಕೇಳಿ ಬಂದಿರುವ ಆತಂಕಕಾರಿ ವಿಚಾರ ಎಂದರೆ ಜೂನ್ ಅಂತ್ಯದ ವೇಳೆಗೆ ದೆಹಲಿ ಒಂದರಲ್ಲೇ 1 ಲಕ್ಷ ಕೊರೋನಾ ಪ್ರಕರಣಗಳು ಬೆಳಕಿಗೆ ಬರಲಿವೆ ಎಂದು ತಜ್ಞರ ಸಮಿತಿ ಆತಂಕ ಹೊರ ಹಾಕಿದೆ.

ದೇಶದ ರಾಜಧಾನಿಯಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಸರ್ಕಾರ ಅಣಿಯಾಗುತ್ತಿದ್ದು, ಹೀಗಾಗಿ ಐದು ಸದಸ್ಯರ ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯ ವರದಿ ಪ್ರಕಾರ ಜೂನ್ ಅಂತ್ಯಕ್ಕೆ ದೆಹಲಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 1 ಲಕ್ಷ ತಲುಪಲಿದೆ. ಹೀಗಾಗಿ, ಕನಿಷ್ಠ 42 ಸಾವಿರ ಬೆಡ್ಗಳ ಅವಶ್ಯಕತೆ ಬೀಳಲಿದೆ ಎನ್ನಲಾಗಿದೆ.

ಸಮಿತಿಯ ಸದಸ್ಯರೊಬ್ಬರು ಹಿಂದುಸ್ತಾನ್ ಟೈಮ್ಸ್ಗೆ ನೀಡಿದ ಮಾಹಿತಿ ಪ್ರಕಾರ, ಈ ತಿಂಗಳಾಂತ್ಯಕ್ಕೆ ದೆಹಲಿಯಲ್ಲಿ 15 ಸಾವಿರ ಬೆಡ್ಗಳ ಅವಶ್ಯಕತೆ ಮಾತ್ರ ಇದೆಯಂತೆ. ಜುಲೈ ಅಂತ್ಯಕ್ಕೆ 1 ಲಕ್ಷ ಕೊರೋನಾ ಪ್ರಕರಣಗಳು ದೆಹಲಿಯಲ್ಲಿ ದಾಖಲಾಗುವ ಸಾಧ್ಯತೆ ಇದೆ ಎಂದು ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.

ದೆಹಲಿಯಲ್ಲಿ 27 ಸಾವಿರ ಕೊರೋನಾ ಪ್ರಕರಣ ದಾಖಲಾಗಿದೆ. 761 ಜನರು ಕೊರೋನಾ ವೈರಸ್ನಿಂದ ಮೃತಪಟ್ಟಿದ್ದಾರೆ. ಭಾರತದಲ್ಲಿ ಕೊರೋನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಿಶ್ವದಲ್ಲಿ ಅತಿ ಹೆಚ್ಚು ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಈಗಾಗಲೇ ಸ್ಪೇನ್ ದೇಶವನ್ನು ಹಿಂದಿಕ್ಕಿ, 5ನೇ ಸ್ಥಾನವನ್ನು ಅಲಂಕರಿಸಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 9,971 ಕೊರೋನಾ ಪ್ರಕರಣಗಳು ಪತ್ತೆಯಾದರೆ, 287 ಮಂದಿ ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,46,628ಕ್ಕೆ ಏರಿಕೆಯಾಗಿದೆ.

Comments are closed.