ಕರ್ನಾಟಕ

ಕೊರೊನಾ ಸೋಂಕಿನಿಂದ ರಕ್ಷಣೆಗೆ ಪೊಲೀಸರು ಪಾಲಿಸಬೇಕಾದ ಮಾರ್ಗಸೂಚಿ ಹೀಗಿವೆ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಕರ್ತವ್ಯದ ವೇಳೆ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತು 79 ಪುಟಗಳ ಮಾರ್ಗಸೂಚಿಯನ್ನು ಪೊಲೀಸ್‌ ಪ್ರಧಾನ ಕಚೇರಿಯಿಂದ ಹೊರಡಿಸಲಾಗಿದೆ. ಈ ಮಾರ್ಗಸೂಚಿಯಲ್ಲಿ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದ್ದು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ.

ಪೊಲೀಸರು ಠಾಣೆಗೆ ಪ್ರವೇಶಿಸುವವರು ಕೈ, ಕಾಲು ತೊಳೆಯುವುದು ಮಾರ್ಗಸೂಚಿ ಪ್ರಕಾರ ಕಡ್ಡಾಯವಾಗಿದೆ. ಠಾಣೆಯಲ್ಲಿ ಇದಕ್ಕಾಗಿ ಸಾಬೂನಿನ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿಲಾಗಿದೆ. ಪ್ರಕರಣಗಳ ಸ್ಥಳ ತನಿಖೆಗೆ ಪೂರ್ತಿ ತೋಳಿನ ಶರ್ಟ್‌ ಧರಿಸಬೇಕು ಹಾಗೂ ಸಮೀಪದಿಂದ ತನಿಖೆ ಮಾಡುವ ವೇಳೆ ಪಿಪಿಇ ಕಿಟ್‌, ಮಾಸ್ಕ್, ಗ್ಲೌಸ್‌ ಧರಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ಸದ್ಯದ ಮಟ್ಟಿಗೆ ಪೊಲೀಸರು ಮನೆ ಆಹಾರ ಸೇವಿಸಬೇಕು ಹಾಗೂ ಮನೆಯಿಂದಲೇ ತಂದ ನೀರು ಬಳಕೆ ಮಾಡಬೇಕು ಎಂದು ತಿಳಿಸಲಾಗಿದೆ. ಆರೋಪಿಗಳು, ಶಂಕಿತರ ಸಾಗಿಸಿದ ವಾಹನ ಸ್ಯಾನಿಟೈಜ್‌ ಮಾಡಬೇಕು ಹಾಗೂ ಪ್ರತಿವಾರ ಠಾಣೆಯನ್ನು ಸ್ಯಾನಿಟೈಜೇಷನ್‌ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ವಿಐಪಿ, ವಿವಿಐಪಿ, ಸಿಎಂ, ಪಿಎ ಕಾರ್ಯಕ್ರಮಗಳ ವೇಳೆಯೂ ಮಾಸ್ಕ್‌, ಗ್ಲೌಸ್‌, ವೈಸರ್‌ ಧರಿಸಬೇಕು. ಠಾಣೆಗೆ ಕರ್ತವ್ಯಕ್ಕೆ ಬರುವವರನ್ನು ಕಡ್ಡಾಯವಾಗಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡಬೇಕು ಹಾಗೂ ಸಿಬ್ಬಂದಿಗೆ ಭದ್ರತೆಯ ಬ್ರಿಫಿಂಗ್‌ ಅನ್ನು ವಾಟ್ಸ್‌ಆ್ಯಪ್‌ ವಿಡಿಯೊ ಮೂಲಕ ತಿಳಿಸಬೇಕು ಎಂದು ಸೂಚಿಸಲಾಗಿದೆ.

ಡೋರ್‌ಫ್ರೆಮ್‌ ಮೆಟಲ್‌ ಡಿಟೆಕ್ಟರ್‌ಗೆ ಮೊದಲು ಥರ್ಮಾ ಮೀಟರ್‌ಮೂಲಕ ಸ್ಕ್ರೀನಿಂಗ್‌ ಮಾಡಬೇಕು. ಸ್ಕ್ರೀನಿಂಗ್‌ ಮಾಡುವವರು ಕಡ್ಡಾಯವಾಗಿ ಪಿಪಿಇ ಕಿಟ್‌ ಧರಿಸಿರಬೇಕು. ಕರ್ತವ್ಯಕ್ಕೆ ಬಳಸುವ ಲಾಠಿ, ವಾಕಿಟಾಕಿ, ಹೆಲ್ಮೆಟ್‌, ಬಾಡಿ ಪ್ರೊಟೆಕ್ಟರ್‌ಗಳನ್ನು ಬಳಕೆಗೆ ಮೊದಲು ಮತ್ತು ನಂತರ ಡಿಸ್‌ಇನ್ಫೆಕ್ಷನ್‌ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖ ಮಾಡಲಾಗಿದೆ.

Comments are closed.