ಕುಂದಾಪುರ: ನಿವೃತ್ತಿಯ ದಿನವೇ ಮಧ್ಯಾಹ್ನ ಬೀಳ್ಕೊಡುಗೆಯ ಸಂದರ್ಭ ಠಾಣೆಯಲ್ಲಿ ಊಟ ಮಾಡುತ್ತಿದ್ದಾಗಲೇ ಬ್ರೈನ್ ಹ್ಯಾಮರೇಜ್‍ಗೊಳಗಾಗಿ ಕೋಟ ಪೊಲೀಸ್ ಠಾಣೆ ಎಎಸ್ಐ ಆನಂದ ವೆಂಕಟ್ ದೇವಾಡಿಗ(60) ಮಣಿಪಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡುತ್ತಿದ್ದಾರೆ.

ಎಎಸ್‍ಐ ಆನಂದ ವೆಂಕಟ್ ಅವರು ಮೇ 31ರಂದು ಭಾನುವಾರ ನಿವೃತ್ತಿಯಾಗಬೇಕಿತ್ತು. ಅದೇ ಸಂಭ್ರಮದಲ್ಲಿ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಠಾಣೆಯಲ್ಲಿಯೇ ಊಟದ ವ್ಯವಸ್ಥೆಯೂ ಇತ್ತು. ಭಾನುವಾರ ಮಧ್ಯಾಹ್ನ ಠಾಣೆಯೊಳಗೆ ಊಟ ಮಾಡುತ್ತಿದ್ದಾಗಲೇ ಆನಂದ ವೆಂಕಟ್ ಕುಸಿದು ಬಿದ್ದಿದ್ದಾರೆ. ತಕ್ಷಣ ವಾಹನದಲ್ಲಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿ ತಿಳಿಸಿದ್ದು ಸದ್ಯ ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Comments are closed.