ರಾಷ್ಟ್ರೀಯ

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹಂಚಿಕೊಳ್ಳುತ್ತಲೇ ಭಾರಿ ವೈರಲ್ ಆದ ಬಾಲಿವುಡ್ ನಟಿ ಸಾರಾ ಅಲಿ ಖಾನ್

Pinterest LinkedIn Tumblr


ನವದೆಹಲಿ: ತನ್ನ ಡೆಬ್ಯೂ ಚಿತ್ರ ‘ಕೇದಾರ್ ನಾಥ್’ ಬಿಡುಗಡೆಯಾದಾಗಿನಿಂದಲೇ ಖ್ಯಾತ್ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸುದ್ದಿಯಲ್ಲಿದ್ದಾಳೆ. ಈ ಮೊದಲ ಚಿತ್ರದ ಮೂಲಕವೇ ಸಾರಾ ತಾನೋರ್ವ ಹುಟ್ಟು ನಟಿ ಎಂಬುದನ್ನು ಸಾಬೀತುಪಡಿಸಿದ್ದಾಳೆ . ದೇಶಾದ್ಯಂತ ಲಾಕ್ ಡೌನ್ ಮುಂದುವರೆದ ಈ ಸಮಯದಲ್ಲಿ ಸಾರಾ ತನ್ನ ಕುಟುಂಬ ಸದಸ್ಯರ ಜೊತೆಗೆ ಕಾಲ ಕಳೆಯುತ್ತಿದ್ದಾಳೆ. ಅಷ್ಟೇ ಅಲ್ಲ ತನ್ನ ತಾಯಿ ಹಾಗೂ ಸಹೋದರನ ಜೊತೆ ಸೇರಿ ಭಾವಚಿತ್ರ ಹಾಗೂ ವಿಡಿಯೋಗಳನ್ನೂ ಸಹ ತನ್ನ ಅಭಿಮಾನಿಗಳ ಜೊತೆಗೆ ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾಳೆ. ಲಾಕ್ ಡೌನ್ ಇರುವ ಕಾರಣ ಹಲವು ಸೆಲಿಬ್ರಿಟಿಗಳು ಮನೆಯಲ್ಲಿಯೇ ಬಂಧಿಯಾಗಿರುವ ಕಾರಣ ಅವರ ಲೇಟೆಸ್ಟ್ ವಿಡಿಯೋಗಳು ಬಹಿರಂಗಗೊಳ್ಳುತ್ತಿಲ್ಲ. ಇಂತಹುದರ ನಡುವೆ ಹಲವರು ತಮ್ಮ ಹಳೆ ಭಾವಚಿತ್ರ ಹಾಗೂ ವಿಡಿಯೋಗಳನ್ನೂ ಥ್ರೋಬ್ಯಾಕ್ ಮಾಡುತ್ತಿದ್ದಾರೆ.

ಈ ನಡುವೆ ತನ್ನ ಇನ್ತ್ಸಾಗ್ರಾಮ್ ಖಾತೆಯಲ್ಲಿ ಸಾರಾ ಹಂಚಿಕೊಂಡಿರುವ ಲೇಟೆಸ್ಟ್ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹಲ್ಚಲ್ ಸೃಷ್ಟಿಸುತ್ತಿದೆ. ಈ ವಿಡಿಯೋದಲ್ಲಿ ಸಾರಾ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದು, ಅವಳ ಅಭಿಮಾನಿಗಳ ಮೆಚ್ಚುಗೆಗೂ ಕೂಡ ವಿಡಿಯೋ ಪಾತ್ರವಾಗುತ್ತಿದೆ. ಸಾರಾ ತನ್ನ ಹಲವು ವಿಡಿಯೋಗಳನ್ನು ಜೋಡಿಸಿ ಈ ವಿಡಿಯೋ ಅನ್ನು ತಯಾರಿಸಿದ್ದಾಳೆ. ಈ ವಿಡಿಯೋದಲ್ಲಿ ಸಾರಾ ಜಿಮ್ ನಿಂದ ಹಿಡಿದು ಸ್ವಿಮ್ಮಿಂಗ್ ಪೂಲ್ ವರೆಗೆ ಹಲವು ಮೋಹಕ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ.

ಸಾರಾ ಅಭಿನಯಿಸುತ್ತಿರುವ ಚಿತ್ರಗಳ ಕುರಿತು ಹೇಳುವುದಾದರೆ, ಸಾರಾ, 1995ರಲ್ಲಿ ಮೂಡಿ ಬಂದ ‘ಕೂಲಿ ನಂ.1’ ಚಿತ್ರ’ದ ರಿಮೇಕ್ ಚಿತ್ರದಲ್ಲಿ ವರುಣ್ ಧವನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಆವೃತ್ತಿಯ ನಿರ್ದೇಶನದ ಜಬಾಬ್ದಾರಿಯನ್ನು ಡೇವಿಡ್ ಧವನ್ ಹೊತ್ತುಕೊಂಡಿದ್ದಾರೆ. ಡೇವಿಡ್ ಈ ಮೊದಲು ಗೋವಿಂದಾ ಹಾಗೂ ಕರಿಷ್ಮಾ ಕಪೂರ್ ಅಭಿನಯದ ಮೊದಲ ಆವೃತ್ತಿಯ ನಿರ್ದೇಶನ ಕೂಡ ಮಾಡಿದ್ದಾರೆ.

Comments are closed.