ಕರಾವಳಿ

ಪಿಯುಸಿ ಮೌಲ್ಯಮಾಪಕರಿಗೆ ಮಾಸ್ಕ್ ಹಾಗೂ ಕಚೇರಿಗೆ ಸ್ಯಾನಿಟೈಸರ್ ವಿತರಣೆ

Pinterest LinkedIn Tumblr

ಮಂಗಳೂರು : ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್. ಎಲ್ ಭೋಜೇಗೌಡ ವತಿಯಿಂದ ಮಂಗಳೂರು ಜಿಲ್ಲಾ ಕೇಂದ್ರದ ದ್ವಿತೀಯ ಪಿಯುಸಿ ಮೌಲ್ಯಮಾಪನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಮೌಲ್ಯಮಾಪಕರಿಗೆ ಮಾಸ್ಕ್ ಹಾಗೂ ಕೇಂದ್ರ ಕಚೇರಿಗೆ ಸ್ಯಾನಿಟೈಸರ್ ವಿತರಿಸಿದರು.

ಯುವ ಜನತಾದಳ ಜಿಲಾಧ್ಯಕ್ಷ ಅಕ್ಷಿತ್ ಸುವರ್ಣ ಮೌಲ್ಯಮಾಪನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಮೌಲ್ಯಮಾಪಕ ರಿಗೆ ಮಾಸ್ಕ್ ಹಾಗೂ ಕೇಂದ್ರ ಕಚೇರಿಗೆ ಸ್ಯಾನಿಟೈಸರ್ ವಿತರಿಸಿದರು.

ಈ ಸಂದರ್ಭ ದ.ಕ ಪದವಿ ಪೂರ್ವ ಪ್ರಾಚಾರ್ಯರ ಸಂಘದ ಅಧ್ಯಕ್ಷ ಉಮೇಶ್ ಕರ್ಕೇರ, ದ.ಕ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರ್ ನಾಯಕ್, ಜೆಡಿಎಸ್ ಮುಖಂಡರಾದ ರತೀಶ್ ಕರ್ಕೇರ,ಹಿತೇಶ್ ರೈ , ಮೊಹಮ್ಮದ್ ಫೈಝಲ್ ಉಪಸ್ಥಿತರಿದ್ದರು.

Comments are closed.